Panjab: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಟಾಪರ್ ಆಗಿ ಹೊರಹೊಮ್ಮಿದ ಆರ್ಯನ್ ಗುಪ್ತಾ..

Panjab: ನೀಟ್ ಯುಜಿ 2016ರ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್ ಆಗಿದ್ದಾನೆ. 720 ಅಂಕಕ್ಕೆ 715 ಅಂಕ ಗಳಿಸಿ, ಇಡೀ ಭಾರತದಲ್ಲೇ ಪ್ರಥಮ ರ್ಯಾಂಕ್ ಗಳಿಸಿದ್ದಾನೆ. ವೈದ್ಯನಾಗುವ ಕನಸು ಕಂಡಿರುವ ಆರ್ಯನ್ ತಂದೆ ಡಾ.ಸಚಿನ್ ಗುಪ್ತಾ ಅರವಳಿಕೆ ತಜ್ಞರು ಮತ್ತು ತಾಯಿ ಡಾ.ರೀನಾ ಗುಪ್ತಾ ಸ್ತ್ರೀರೋಗ ತಜ್ಞರಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆರ್ಯನ್, ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಪ್ರತಿದಿನ 17 ಗಂಟೆ ಓದುತ್ತಿದ್ದೆ. ಅಲ್ಲದೇ, ನಿದ್ರಿಸುವುದನ್ನೂ ಕಡಿಮೆ ಮಾಡಿದ್ದೆ. ಅದಕ್ಕೆ ತಕ್ಕ ಫಲಿತಾಂಶ ಸಿಕ್ಕಿದೆ ಎಂದು ಆರ್ಯನ್ ಸಂತಸ ವ್ಯಕ್ತಪಡಿಸಿದ್ದಾರೆ.

ಕ್ಯಾನ್ಸರ್ ತಜ್ಞ ಆಗಬೇಕು ಅಂದುಕ“ಂಡಿರುವ ಆರ್ಯನ್, ತಮ್ಮ ಜೀವನದ ಕೆಲ ಕಹಿ ಘಟನೆಯ ಬಗ್ಗೆ ಹೇಳಿದ್ದಾರೆ. ಆರ್ಯನ್ ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ, ಆತನ ಅಜ್ಜಿ 4ನೇ ಹಂತದ ಕ್ಯಾನ್ಸರ್‌ನಿಂದ ಮೃತರಾಗಿದ್ದರು. ನಮ್ಮ ಮನೆಯಲ್ಲಿ ಎಲ್ಲರೂ ವೈದ್ಯರಾಗಿದ್ದರೂ, ಅಜ್ಜಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಹಾಗಾಗಿ ನಾನು ಕ್ಯಾನ್ಸರ್ ತಜ್ಞನಾಗಬೇಕು ಅಂದುಕ“ಂಡಿದ್ದೇನೆ. ಈ ಮಾರಕ ಖಾಯಿಲೆಯ ವಿರುದ್ಧ ಹೋರಾಡಬೇಕು ಎಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ ಆರ್ಯನ್.

ಅಲ್ಲದೇ, ಜೀವನದಲ್ಲಿ ಇನ್ನೂ ಹೆಚ್ಚು ಕಲಿಯಬೇಕಿದೆ. ಯಶಸ್ಸು ಸಾಧಿಸಬೇಕಿದೆ. ಆ ಸಾಧನೆಗೆ ಈ ಹೆಜ್ಜೆ ಸಂತೋಷ ತಂದಿದೆ ಎಂದು ಆರ್ಯನ್ ಹೇಳಿದ್ದಾರೆ.

About The Author