www.karnatakatv.net : ಬೆಳಗಾವಿ: 2019 ರಲ್ಲಿ ಮಲಪ್ರಭಾ ನದಿಯ ಪ್ರವಾಹ ಬಂದ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಒಂದಷ್ಟು ಗ್ರಾಮಗಳು ಪ್ರವಾಹದಲ್ಲಿ ಸಿಲುಕಿಕೊಂಡಿದ್ದವು ಆದರೆ ಪ್ರವಾಹ ಬಂದ ಸಂದರ್ಭದಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಭೇಟಿ ನೀಡಿದಾಗ ನೆರೆ ಸಂತ್ರಸ್ತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆಶ್ರಯ ಯೋಜನೆಯಡಿಯಲ್ಲಿ ರೇವಡಿಕೊಪ್ಪ ಗ್ರಾಮದಲ್ಲಿ ನಿರ್ಮಿಸಲಾಗಿರುವ ಆಶ್ರಯ ಮನೆಗಳಲ್ಲಿ 18 ಕುಟುಂಬಗಳ ಸಂತ್ರಸ್ತರಿಗೆ ಇರಲಿಕೆ ಅವಕಾಶ ಜಿಲ್ಲಾಧಿಕಾರಿಯವರು ಅನುಕೂಲತೆ ಮಾಡಿಕೊಟ್ಟಿದ್ದರು.
ಸಂತ್ರಸ್ತರು ಸುಮಾರು 3 ವರ್ಷಗಳಿಂದ ಆಶ್ರಯ ಮನೆಗಳಲ್ಲಿ ವಾಸಿಸುತ್ತಿದ್ದು ವಸತಿ ಸಚಿವರಾದ ವಿ.ಸೊಮಣ್ಣ ಅವರು ಸಹ ಅದೇ ಆಶ್ರಯ ಮನೆಗಳಲ್ಲಿ ಇರಲು ಅವರು ಸಹ ಅನುಮತಿ ನೀಡಿದ್ದರು ಆದರೆ ರಾಮದುರ್ಗ ತಹಶಿಲ್ದಾರರು ಯಾವುದೇ ರೀತಿಯಲ್ಲಿ ನೋಟಿಸ್ ನೀಡದೆ ನೆರೆಸಂತ್ರಸ್ತರ ಮನೆಗಳಿಗೆ ನುಗ್ಗಿ ಹೊರ ಹಾಕಿದ್ದಾರೆ ಇಂತಹ ಸಂದರ್ಭದಲ್ಲಿ ನೆರೆಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುವ ಕೆಲಸದಲ್ಲಿ ಇದ್ದುಕೊಂಡು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿ ಅಲ್ಲ ಎಂದು ನೆರೆಸಂತ್ರಸ್ತರು ತಾಲೂಕಾಡಳಿತ ವಿರುದ್ದ ಅಕ್ರೋಶ ಹೊರಹಾಕಿದರು.
ಹಲವು ದಿನಗಳಿಂದ ಮಳೆ ಆಗುತ್ತಿರುವುದರಿಂದ ಸಂತ್ರಸ್ತರು ಅನೇಕ ತೊಂದರೆ ಅನುಭವಿಸುವಂತಾಗಿದೆ. ತಹಶಿಲ್ದಾರರು ಸಂತ್ರಸ್ತರನ್ನು ಹೊರ ಹಾಕಿದ್ದರಿಂದ ಅವರ ಕಡೆ ಇರುವ ಕಾಳುಗಳು ಮೊಳಕೆ ನಾಟಿದ್ದಾವೆ ಇದರಿಂದ ನಾವೆಲ್ಲರೂ ಉಪವಾಸ ಉಳಿದಿದ್ದು ಸಣ್ಣ ಪುಟ್ಟ ಮಕ್ಕಳು ಸಹ ಹೊರಗೆ ಉಳಿದಿದ್ದು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದೆವೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ವತಿಯಿಂದ ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.ಇದರಿಂದ ಜಿಲ್ಲಾಡಳಿತ ಎನಾದರೂ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತಾ ಎಂದು ನೋಡಬೇಕಿದೆ.
ಇದೇ ಸಂದರ್ಭದಲ್ಲಿ ರಾಜು ಚಲವಾದಿ ಸಂತ್ರಸ್ತ ಮಾತನಾಡಿ 3 ವರ್ಷಗಳಿಂದ ನಾವು ಇಲ್ಲಿಯೇ ವಾಸವಾಗಿದ್ದೇವೆ ಇದರಿಂದ ತಹಶಿಲ್ದಾರರು ಬಂದು ನಮ್ಮನ್ನ ಬೀದಿಗೆ ತಳ್ಳಿಹಾಕಿದ್ದಾರೆ ಇದರಿಂದ ನಮಗೆ ಶಾಶ್ವತ ಪರಿಹಾರ ಕೊಡಿಸಬೇಕು ಮತ್ತು ನಮ್ಮ ಕಡೆ ಇರುವ ವಸ್ತುಗಳು ಎಲ್ಲಾ ಹಾಳಾಗಿ ಹೋಗಿವೆ ಇದರಿಂದ ಪರಿಹಾರ ನೀಡಬೇಕು ಎಂದು ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.