Bollywood News: ಬಾಲಿವುಡ್ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಸದ್ಯ ನಟನೆಯಿಂದ ದೂರವಿದ್ದಾರೆ. ಯಾಕಂದ್ರೆ ಅವರು ತಾಯಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಪ್ರಸವವಾಗಲಿದೆ.
ಆದ್ರೆ ದೀಪಿಕಾಳ ಹೊಟ್ಟೆ ನೋಡಿ, ನೆಟ್ಟಿಗರು ಆಕೆ ಗರ್ಭಿಣಿಯೇ ಅಲ್ಲ ಅಂತಿದ್ದಾರೆ. ದೀಪಿಕಾ ಗರ್ಭಿಣಿ ಆಗಿರುವ ರೀತಿ ನಾಟಕವಾಡುತ್ತಿದ್ದಾರೆ. ಅವರು ನಡೆಯುವ ರೀತಿ, ಅವರ ದೇಹದ ಬೆಳವಣಿಗೆ, ಹೊಟ್ಟೆಯನ್ನು ನೋಡಿ ಅವರು ಗರ್ಭಿಣಿ ಅಂತಾ ಅನ್ನಿಸೋದೇ ಇಲ್ಲ. ಇವರು ಬಾಡಿಗೆ ತಾಯಿಯಾಗ ಹೊರಟಿದ್ದಾರೆ. ಆದರೆ ಅದು ಭಾರತದಲ್ಲಿ ಸಾಧ್ಯವಿಲ್ಲ. ಹಾಗಾಗಿ ಗರ್ಭಿಣಿಯಾಗಿರುವ ನಾಟಕವಾಡುತ್ತಿದ್ದಾರೆಂದು ನೆಟ್ಟಿಗರು ಹೇಳಿದ್ದಾರೆ.
ದೀಪಿಕಾ ಫೋಟೋ, ವೀಡಿಯೋ ವೈರಲ್ ಆದಾಗೆಲ್ಲ, ಜನ ಇದೇ ರೀತಿ ಕಾಮೆಂಟ್ ಮಾಡುತ್ತಿದ್ದು, ಆಕೆಯ ಹೊಟ್ಟೆ ಬಿಟ್ಟರೆ, ಆಕೆಯ ದೇಹದ ಬೆಳವಣಿಗೆ ಹಾಗೇ ಇದೆ. ಹೊಟ್ಟೆಯೂ ಆಗಾಗ ಶೇಪ್ ಚೇಂಜ್ ಆಗುತ್ತಿದೆ. ಹಾಗಾಗಿ ಆಕೆ ನಿಜವಾಗಿಯೂ ಗರ್ಭಿಣಿಯಾಗಿಲ್ಲವೆಂದು ಗೊತ್ತಾಗುತ್ತದೆ ಎಂದು ಕೆಲವರು ಹೇಳಿದ್ದಾರೆ.
ಅಲ್ಲದೇ, ಮತ್ತೆ ಕೆಲವರು, ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿ ಬಾಡಿಗೆ ತಾಯ್ತನದಿಂದ ಮಗು ಪಡೆದಿದ್ದು, ದೀಪಿಕಾ ಕೂಡ ಇದೇ ಕೆಲಸ ಮಾಡುತ್ತಿರಬೇಕು ಎಂದು ಆರೋಪಿಸಿದ್ದಾರೆ. ಮತ್ತೆ ಕೆಲವರು ನಾನು ಗರ್ಭಾವಸ್ಥೆಯಲ್ಲಿ ಇದ್ದಾಗ, ನನಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಮುಖ, ದೇಹವೆಲ್ಲಾ ಊದಿಕೊಂಡಿರುತ್ತಿತ್ತು. ಆದರೆ ಈಕೆ ಏನೂ ಆಗೇ ಇಲ್ಲ ಅನ್ನೋ ರೀತಿ ನಡೆಯುತ್ತಾಳೆ. ಅಲ್ಲದೇ, ಹೀಲ್ಸ್ ಬೇರೆ ಹಾಕುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ದೀಪಿಕಾ ಪರ ಬ್ಯಾಟ್ ಬೀಸಿದ್ದು, ದೀಪಿಕಾ ಗರ್ಭಿಣಿಯಾಗಿರುವುದು ನಿಜವೆನ್ನಿಸುತ್ತದೆ. ಆಕೆಯ ಹೊಟ್ಟೆ ನೋಡಿ ನೀವು ಈ ರೀತಿ ಜಡ್ಜ್ ಮಾಡಬಾರದು. ಆಕೆ ನಟಿಯಾಗಿರುವ ಕಾರಣ, ಆಕೆ ಆರೋಗ್ಯಕರ ಡಯಟ್‌ನಲ್ಲಿರಬಹುದು. ಯೋಗ, ವ್ಯಾಯಮಗಳನ್ನು ಮಾಡುತ್ತಿರಬಹುದು. ಹಾಗಾಗಿ ಆಕೆ ಗರ್ಭಿಣಿಯಾದರೂ, ಫಿಟ್ ಆಗಿದ್ದಾರೆ ಎಂದಿದ್ದಾರೆ.
ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ನಟಿ ದೀಪಿಕಾ ಏನೂ ಮಾಡಿದ್ರೂ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೇಸರಿ ಬಿಕಿನಿ ಧರಿಸಿ, ಸುದ್ದಿಯಾಗಿದ್ರು. ಬಳಿಕ ಹಾಟ್ ಸೀನ್ ಮಾಡಿ, ಆ ಸೀನ್‌ಗೆ ಕತ್ತರಿ ಬಿದ್ದಾಗಲೂ ಸುದ್ದಿಯಾಗಿದ್ದರು.
ಅಲ್ಲದೇ ಕರಣ್ ನಡೆಸಿಕೊಡುವ ಶೋನಲ್ಲಿ, ನಾನು ಮೂವರನ್ನು ಡೇಟ್ ಮಾಡುತ್ತಿದ್ದೆ. ಆದರೆ ನನಗೆ ರಣ್ವೀರ್ ಸಿಂಗ್‌ನನ್ನು ಮದುವೆಯಾದರೆ, ಲೈಫ್ ಚೆನ್ನಾಗಿರುತ್ತೆ ಅನ್ನಿಸಿತು. ಅದಕ್ಕೆ ಅವರನ್ನು ಆಯ್ಕೆ ಮಾಡಿದೆ ಎಂದಿದ್ದರು. ಇದರ ಅರ್ಥ, ರಣ್ವೀರ್‌ನನ್ನು ಆಕೆ ಲಾಭಕ್ಕಾಗಿ ಮದುವೆಯಾಗಿದ್ದಳು ಎಂದು ಟ್ರೋಲ್ ಆಗಿದ್ದರು. ಇದೀಗ ಪ್ರೆಗ್ನೆನ್ಸಿ ವಿಷಯದಲ್ಲೂ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರು, ನೀವು ನಿಜವಾಗ್ಲೂ ಗರ್ಭಿಣಿಯಾಗಿದ್ದರೆ, ಮತ್ಯಾಕೆ ಬೇರೆ ಸೆಲೆಬ್ರೆಟಿಗಳ ರೀತಿ ಹೊಟ್ಟೆ ತೋರಿಸಿ, ಫೋಟೋಶೂಟ್ ಮಾಡಿಲ್ಲವೆಂದು ಪ್ರಶ್ನೆ ಕೇಳುತ್ತಿದ್ದಾರೆ.