- Advertisement -
ಬೆಂಗಳೂರು:ನಗರದ ಸಾರ್ವಜನಿಕರಿಗೆ ಆರಾಮದಾಯಕ ಪರಿಸರ- ಸ್ನೇಹಿ ಪ್ರಯಾಣವನ್ನು ಕಲ್ಪಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 921 ಟಾಟಾ ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸುತ್ತಿದ್ದು, ಇಂದು ಶ್ರೀ ರಾಮಲಿಂಗಾ ರೆಡ್ಡಿ, ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು, ಕರ್ನಾಟಕ ಸರ್ಕಾರರವರು ಉದ್ಘಾಟಿಸಿದರು.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್ ನ ಪ್ರಥಮ ಪ್ರೊಟೊಟೈಪ್ ಮಾದರಿಯನ್ನು ಇಂದು ಶ್ರೀ ರಾಮಲಿಂಗಾ ರೆಡ್ಡಿ, ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು, ಕರ್ನಾಟಕ ಸರ್ಕಾರರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು , ಬೆಂಗಳೂರಿನ ಜನತೆಯು, ಬಿ.ಎಂ.ಟಿ.ಸಿ ಯ ನೂತನ ವಿದ್ಯುತ್ ವಾಹನಗಳಲ್ಲಿ ಪ್ರಯಾಣಿಸಿ ಮಾಲಿನ್ಯ ರಹಿತ ನಗರದ ಅನುಭವವನ್ನು ಪಡೆಯಲಿದ್ದಾರೆ. ಕರ್ನಾಟಕ ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ 4000 ಹೊಸ ವಾಹನಗಳನ್ನು ಒದಗಿಸುವ ಮತ್ತು 13000 ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್ ನಲ್ಲಿ ರೂ.500 ಕೋಟಿಗಳನ್ನು ನಿಗಮಗಳಿಗೆ ಬಸ್ ಖರೀದಿಗಾಗಿ ವಿಸ್ತರಿಸುವುದಾಗಿ ತಿಳಿಸಿದರು.
ಮುಂದುವರೆದು, ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳಿಗೆ ನೂತನ ವಾಹನಗಳನ್ನು ಒದಗಿಸಲಾಗಿದ್ದು, ಇದರಿಂದ ಅವರು ಬಸ್ ನಿಲ್ದಾಣಗಳು, ಮೋಟಾರು ವಾಹನ ಇಲಾಖೆ, ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಬೇಡಿ ನೀಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದೆಂದು ತಿಳಿಸಿ, ಈ ನೂತನ 921 ಎಲೆಕ್ಟ್ರಕ್ ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನ ಬಲಕ್ಕೆ ಈ ಆರ್ಥಿಕ ವರ್ಷದೊಳಗಾಗಿ ಹಂತ-ಹಂತವಾಗಿ ಸೇರ್ಪಡೆ ಮಾಡುವುದಾಗಿ ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಈ ನೂತನ 921 ಟಾಟಾ ವಿದ್ಯುತ್ ವಾಹನಗಳನ್ನು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿ.ಸಿ.ಸಿ ಆಧಾರದ ಮೇಲ್ ಕಾರ್ಯಾಚರಣೆ ಮಾಡಲಿದ್ದು, ಕಾರ್ಯಾಚರಣೆಯ ಪ್ರಮುಖ ಅಂಶಗಳು ಕೆಳಕಂಡಂತಿದೆ.
1. ಈ ಬಸ್ಸುಗಳು 12.0 ಮೀಟರ್ ಉದ್ದದ, low floor ಎಲೆಕ್ಟ್ರಿಕ್ ಬಸ್ಸುಗಳಾಗಿರುತ್ತದೆ ಹಾಗೂ Floor ಎತ್ತರ: 400 mm ಆಗಿರುತ್ತದೆ.
2. ಈ ಬಸ್ 35 ಪ್ರಯಾಣಿಕರಿಗೆ ಆರಾಮದಾಯಕ ಆಸನ ಮತ್ತು ಅದರ ಕೆಳ-ಮಹಡಿ ಸಂರಚನೆಯೊಂದಿಗೆ ಸುಲಭ ಪ್ರವೇಶ ಮತ್ತು ಹೊರಹೋಗುವಿಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
3. ಬೆಂ.ಮ.ಸಾ.ಸಂಸ್ಥೆಯು 1500 ಎಲೆಕ್ಟ್ರಿಕ್ ಬಸ್ಸುಗಳನ್ನು ತನ್ನ ವಾಹನ ಬಲಕ್ಕೆ ಸೇರ್ಪಡೆಗೊಳಿಸಲು ಗ್ರ್ಯಾಂಡ್ ಚಾಲೆಂಜ್ ನಲ್ಲಿ ಭಾಗವಹಿಸಿತ್ತು.
4.GCC ಆಧಾರದಲ್ಲಿ ಈ ಬಸ್ಸುಗಳ ಪ್ರತಿ ಕಿ.ಮೀ ಕಾರ್ಯಾಚರಣೆಯ ದರ ರೂ.41.01 ಮೊತ್ತವಾಗಿರುತ್ತದೆ.
5. ಭಾರಿ ಕೈಗಾರಿಕ ಸಚಿವಾಲಯ, ಕೇಂದ್ರ ಸರ್ಕಾರ ವತಿಯಿಂದ 921 ಟಾಟಾ ಎಲೆಕ್ಟ್ರಿಕ್ ಬಸ್ಸುಗಳಿಗೆ ಸಹಾಯಧನವನ್ನು ಒದಗಿಸಲಾಗಿದೆ.
7. ಈ ಸಹಾಯಧನದ ಅನ್ವಯ ಬೆಂ.ಮ..ಸಾ.ಸಂಸ್ಥೆಯು ಒಟ್ಟು 921 ಎಲೆಕ್ಟ್ರಿಕ್ ಬಸ್ಸುಗಳನ್ನು Gross Cost Contract (GCC) Model ಆಧಾರದ ಮೇಲೆ ಕಾರ್ಯಾಚರಣೆ ಮಾಡಬಹುದಾಗಿರುತ್ತದೆ.
8. ಪ್ರತಿ ಬಸ್ಸನ್ನು45 ನಿಮಿಷ Opportunity Charging ಮಾಡಲಾಗುವುದು.
9. ಈ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು 10 ಘಟಕಗಳನ್ನು ಗುರುತಿಸಲಾಗಿದೆ.
ಕ್ರ.ಸಂ ಘಟಕ ಸ್ಥಳ
1. 03 ಶಾಂತಿನಗರ
2. 04 ಜಯನಗರ
3. 10 ಹೆಣ್ಣೂರು
4 . 16 ದೀಪಾಂಜಲಿನಗರ
5. 21 ರಾಜರಾಜೇಶ್ವರಿನಗರ
6 . 22 ಪೀಣ್ಯ 2ನೇ ಹಂತ
7. 27 ಜಿಗಣಿ
8 .29 ಕೆ.ಆರ್.ಪುರಂ
9. 35 ಸೀಗೇಹಳ್ಳಿ
10 . 39 ಹೊಸಕೋಟೆ
ಪ್ರಾಯೋಗಿಕವಾಗಿ ಕಾರ್ಯಚರಣೆ ಮಾಡುವ ಮಾರ್ಗ: 96-ಎ (ಮಾರ್ಗ: ಕೆಂಪೇಗೌಡ ಬಸ್ ನಿಲ್ದಾಣ, ಸುಜಾತ ಟಾಕೀಸ್, ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ, ಹಾವನೂರು ವೃತ್ತ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್, ಕೆಂಪೇಗೌಡ ಬಸ್ ನಿಲ್ದಾಣ) ಏಕ ದುಂಡು ಸುತ್ತುವಳಿ ಕಿ.ಮೀ. 14.7 ಕಿ.ಮೀ, ಒಟ್ಟು ಅನುಸೂಚಿ ಕಿ.ಮೀ-202.4 ಕಿ.ಮೀ
- Advertisement -