ಕರ್ನಾಟಕದಲ್ಲಿ ಕೊರೊನಾಗೆ ಹೊಸ ಮಾರ್ಗಸೂಚಿ

karnatakaದಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತು ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

1 – ಬೆಂಗಳೂರಿನಲ್ಲಿ 10.11. 12 ಮತ್ತು ಮೆಡಿಕಲ್ ಪ್ಯಾರಾ ಮೆಡಿಕಲ್ ಬಿಟ್ಟು ಉಳಿದೆಲ್ಲಾ ಶಾಲಾ ಕಾಲೇಜು ಬಂದ್ , ಇತ್ತೀಚೆಗೆ 15 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲು ಸರ್ಕಾರ ಮುಂದಾಗಿದೆ, ಇದೊಂದು ಕಾರಣ ಆದರೆ, ಇನ್ನೊಂದು 10, ಪಿ ಯು ಬೋರ್ಡ್ ಎಕ್ಸಾಮ್ ಶುರುವಾಗಿದೆ . ಈಗಾಗಿ ಅವರಿಗೆ ಶಾಲಾ ಕಾಲೇಜುಗಳು ಇರುತ್ತದೆ.
2 – ಹೋಟೆಲ್, ಕ್ಲಬ್,ಬಾರ್ ಅಂಡ್ ರೆಸ್ಟೋರೆಂಟ್ ಮುಂತಾದ ಸ್ಥಳಗಳಲ್ಲಿ 50% ಆಸನಕ್ಕೆ ಮಾತ್ರ ಅವಕಾಶ, ಎರಡು ಡೋಸ್ ಲಸಿಕೆ ಹಾಕಿಕೊಂಡವರಿಗೆ ಮಾತ್ರ ಅವಕಾಶ .

3 – ಥಿಯೇಟರ್,ರಂಗಮoದಿರ, ಆಡಿಟೋರಿಯಂ ಮುಂತಾದ ಸ್ಥಳಗಳಲ್ಲಿ 50% ಮಾತ್ರ ಅವಕಾಶ ಇದರಲ್ಲೂ ಸಹ 2 ಡೋಸ್ ವ್ಯಾಕ್ಸಿನೇಶನ್ ಕಡ್ಡಾಯ.
4 -ಸ್ವಿಮ್ಮಿಂಗ್ ಫೂಲ್, ಜಿಮ್‌ಗಳಲ್ಲಿ 50% ಮಾತ್ರ ಅವಕಾಶ ಇರುತ್ತೆ. ಇದರಲ್ಲೂ ಸಹ 2 ಡೋಸ್ ಕಡ್ಡಾಯ .

5-ಸ್ಪೋಟ್ಸ್ ಕಾಂಫ್ಲೆಕ್ಸ್ ,ಮತ್ತು ಸ್ಟೇಡಿಯಂನಲ್ಲಿ 50% ಮಾತ್ರ ಅವಕಾಶ ಇರುತ್ತದೆ.

6 ಮದುವೆಗಳು ತೆರೆದ ಪ್ರದೇಶದಲ್ಲಿ ನಡುದ್ರೆ 200 ಜನರಿಗೆ ಅವಕಾಶ ಮುಚ್ಚಿದ ಪ್ರದೇಶವಾದ್ರೆ 100 ಜನರಿಗೆ ಮಾತ್ರ ಅವಕಾಶ ಇರುತ್ತದೆ.

7 – ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ, ಯಾವುದೇ ರೀತಿಯ ಸೇವೆಗಳಿಗೆ ಅವಕಾಶ ಇರುವುದಿಲ್ಲ 50% ಮಾತ್ರ ಮತ್ತು 2 ಡೋಸ್ ಲಸಿಕೆ ಹಾಕಿಸಿಕೊಂಡವರಿಗಷ್ಟೇ ಮಾತ್ರ ಅವಕಾಶ.

8 – ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ 5 ದಿನ ಮಾತ್ರ ಕಾರ್ಯ ನಿರ್ವಹಣೆಯನ್ನು ಮಾಡುತ್ತವೆ. ಜೊತೆಗೆ ಸೆಕ್ರೆಟರಿಗಿಂತ ಕಡಿಮೆ ಬರುವ ಎಲ್ಲಾ ಕಚೇರಿಗಳು 50% ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ.

9- ಎಲ್ಲಾ ಧರಣಿ, ರ‍್ಯಾಲಿ, ಪ್ರತಿಭಟನೆಗಳೆಲ್ಲವು ನಿಷೇಧ .

ನೈಟ್ ಕರ್ಫ್ಯೂ ಜನವರಿ 19 ತಾರೀಕಿನ ಬೆಳಗ್ಗೆ 5 ಗಂಟೆಯವರೆಗೂ ಮುಂದುವರೆಯುತ್ತದೆ. ಕೇರಳ, ಮಹರಾಷ್ಟç,ಗಡಿಗಳಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ. ಮತ್ತು ಯಾವುದಾದರೂ ವ್ಯಕ್ತಿ ಈ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಟಿಣ ಕ್ರಮವನ್ನು ಜರುಗಿಸಲಾಗುತ್ತದೆ.

About The Author