ಆ್ಯAಬುಲೆನ್ಸ್ಗೆ ಅಡ್ಡಿ ಮಾಡಿದ್ರೆ ೧೦೦೦೦ ದಂಡ. ಹೆಲ್ಮೆಟ್ ಬೆಲ್ಟ್ ಧರಿಸದೇ ಇದ್ದರೂ ೧೦೦೦ ದಂಡ. ಐ.ಎಸ್.ಐ ಮಾನ್ಯತೆ ಇರೋ ಹೆಲ್ಮೆಟ್ ಹಾಕದಿದ್ರೆ ೧೦೦೦ ರೂ ದಂಡ.
ಮಿತಿ ಮೀರದ ಲಗೇಜು ೨೦೦೦೦, ಸಿಗ್ನಲ್ ಜಂಪ್ ಮಾಡಿದ್ರೆ ೨೦೦೦. ಇಷ್ಟು ನೆನಪಿಟ್ಟುಕೊಳ್ಳಿ. ಇದು ಕೇಂದ್ರ ಸರ್ಕಾರ ಹೊಸದಾಗಿ ಅಪ್ಡೇಟ್ ಮಾಡಿರೋ ರೂಲ್ಸು, ಫೈನ್.
ಇವ್ರಿಗೆ ಹೆಲ್ಮೆಟ್ ಹಾಕರ‍್ಬೇಕು, ಅದ್ರಲ್ಲಿ ಐಎಸ್‌ಐ ಸೀಲ್ ರ‍್ಬೇಕು,ಅದರ ಬೆಲ್ಟ್ ಕುತ್ತಿಗೆ ಕೆಳಗೆ ಹಾಕಿರಬೇಕು. ಇವೆಲ್ಲಾ ರೂಲ್ಸ್ ಮಾಡೋಕೆ ಗೊತ್ತು. ಆದ್ರೆ ರಸ್ತೆ ಮಾತ್ರ ಕಿತ್ತೋಗಿದ್ರೆ ಇವ್ರಿಗೆ ಹೈಕೋರ್ಟ್ ಪದೇ ಪದೇ ಛೀಮಾರಿ ಹಾಕ್ಬೇಕು.
ಸುಮ್ನೆ ಸಿಕ್ಕ ಸಿಕ್ಕಂಗೆ ವಸೂಲಿಗಿಳಿಯೋ ಪೊಲೀಸರು ಒಂದು ಕಡೆಯಾದ್ರೆ ಹೆಲ್ಮೆಟ್, ಆರ್,ಸಿ ಬುಕ್, ಎಮಿಷನ್ ಟೆಸ್ಟ್, ಡ್ರಂಕ್ ಅಂಡ್ ಡ್ರೆöÊವ್ ಅಂತ ವೀಕೆಂಡ್ ಮಂತ್ ಎಂಡ್ ಟಾರ್ಗೆಟ್ ಅಚೀವ್ ಮಾಡೋಕೆ ನಿಂತವರ ತರ ಕಿಲೋಮೀಟರ್‌ಗೆ ಒಂದು ಟೀಂ ನಿಂತುಬಿಟ್ಟಿರುತ್ತೆ. ಮೈಸೂರಲ್ಲಿ ಎರಡು ದಿನದ ಹಿಂದೆ ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಹೋಗಿ ಬೈಕ್ ಆ್ಯಕ್ಸಿಡೆಂಟ್‌ನಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ್ರೆ, ಕೆಲವು ದಿನದ ಹಿಂದೆ ಬೆಂಗಳೂರಲ್ಲಿ ಇದೇ ರೀತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದ. ರೂಲ್ಸ್ ಮಾಡಲಿ, ಫಾಲೋ ಮಾಡಲೇಬೇಕು.
ಆದರೆ ಯಾವ ಮೂಲಭೂತ ಸೌಕರ್ಯಾನೂ ಸರಿಯಾಗಿ ಕೊಡದೆ, ಸರ್ಕಾರಗಳು ಮಾಡೋ ಸುಲಿಗೆ ಪೊಲೀಸರ ಲಂಚದ ಚಟಕ್ಕೆ ಬಲಿಯಾಗೋ ಜನರು ಕೇಳೋ ಪ್ರಶ್ನೆ, ರಸ್ತೆ ಸರಿ ಇದ್ಯಾ..? ಗುಂಡಿ ಯಾವಾಗ ಮುಚ್ತೀರಾ..? ವರ್ಷ ಇಡೀ ಯಾಕೆ ರಸ್ತೆ ಅಗೆದು ಹಾಕರ‍್ತೀರಾ..? ಇದಕ್ಕೆಲ್ಲಾ ಉತ್ತರ ಕೊಡದ, ನೀತಿ ನಿಯಮ ಯಾವುದೂ ಇರದ ಸರ್ಕಾರ , ಅಧಿಕಾರಿಗಳು, ತಾವು ಜನರ ಮೇಲೆ ರೂಲ್ಸು ಹೇರೋದು ಮಾತ್ರ ಬಿಡಲ್ಲ..
ಓಂ, ಕರ್ನಾಟಕ ಟಿವಿ