www.karnatakatv.net :ಇತಿಹಾಸ ಪ್ರಸಿದ್ಧ ಕುಪ್ಪೂರು ಗದ್ದುಗೆ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ವಾಗಿದೆ. ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ಅನಾರೋಗ್ಯದಿಂದ ಲಿಂಗೈರಾಗಿದ್ದರು. ಸದ್ಯ ನೇಮಕ ಆಗಿರುವ ಉತ್ತರಾಧಿಕಾರಿ ಪೀಠಾಧಿಪತಿ ಅಲ್ಲ ಅನ್ನೋ ವಿಷಯ ಗಮನ ಸೆಳೆದಿದೆ..
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಕುಪ್ಪೂರು ಗದ್ದುಗೆ ಮಠದ ತನ್ನದೇ ರೀತಿಯಲ್ಲಿ ಭಕ್ತಾದಿಗಳ ಗಮನ ಸೆಳೆದಿದೆ. ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಶ್ರೀ ಕ್ಷೆತ್ರಕ್ಕೆ ಹಲವು ಶತಮಾನಗಳ ಇತಿಹಾಸ ಇದೆ. ಶ್ರೀ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ನಿಧನ ಬಳಿಕ ಉತ್ತರಾಧಿಕಾರಿ ಆಯ್ಕೆ ವಿಚಾರ ಮುನ್ನೆಲೆಗೆ ಬಂದಿತ್ತು. ಆಗ ಮಠದ ಇತಿಹಾಸದಲ್ಲಿ ಉತ್ತರಾಧಿಕಾರಿಯಾಗುವವರೆ ಯತೀಶ್ವರ ಶ್ರೀಗಳ ಅವರ ಅಂತ್ಯಸಂಸ್ಕಾರ ಮಾಡಬೇಕಿತ್ತು. ಅಲ್ಲದೆ ಹಿಂದಿನ ಚಂದ್ರಶೇಖರ ಸ್ವಾಮೀಜಿ ಅವರು ತೇಜಸ್ ಉತ್ತರಾಧಿಕಾರಿ ಆಗಬೇಕೆಂದು ವಿಲ್ ನಲ್ಲಿ ಬರೆದಿಟ್ಟಿದ್ದಾರೆ. ಹೀಗಾಗಿ ತೇಜಸ್ ಅವರ ನೇತೃತ್ವದಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಅಧಿಕೃತವಾಗಿ ಮಠದ ಪೀಠಾಧಿಕಾರಿಯಾಗಿ ಅವರನ್ನು ನೇಮಿಸಿಲ್ಲ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ ಮಾಧ್ಯಗಳಿಗೆ ಹೇಳಿಕೆ ಕೊಟ್ಟಿದ್ದಾರೆ.
ತೇಜಸ್ ಇನ್ನೂ ಅಧ್ಯಯನ ಮಾಡಬೇಕಿದೆ. ಅಲ್ಲದೆ 18 ವರ್ಷ ಆಗೋವರೆಗೂ ಅದು ಸಾಧ್ಯವಿಲ್ಲ. ಅವರಿಗೆ 18 ವರ್ಷ ಆದ ನಂತರ ಅವರ ಇಚ್ಚೆಯಂತೆ ಅವರು ಪೀಠಾಧಿಕಾರಿ ಆಗಬಹುದಾಗಿದೆ. ಸ್ವಾಮೀಜಿಗಳ ಅಂತ್ಯಸಂಸ್ಕಾರ ನೇತೃತ್ವ ವಹಿಸಲು ಉತ್ತರಾಧಿಕಾರಿ ವ್ಯಕ್ತಿ ಬೇಕಾಗಿತ್ತು. ಅನಿವಾರ್ಯವಾಗಿ ಶ್ರೀಗಳ ಅಂತಿಮ ವಿಧಿವಿಧಾನ ನಡೆಸಲು ಉತ್ತರಾಧಿಕಾರಿ ಅಗತ್ಯವಿತ್ತು. ಆದರೆ ತೇಜಸ್ ಕುಪ್ಪೂರು ಗದ್ದಿಗೆ ಮಠದ ಪೀಠಾಧಿಪತಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾಧುಸ್ವಾಮಿ ಅಲ್ಲದೆ ಕೆಲವು ಮಠಗಳಲ್ಲಿ ವಂಶಪಾರಂಪರ್ಯದವರನ್ನ ಆಯ್ಕೆ ಮಾಡಲಾಗುತ್ತೆ. ಮತ್ತೆ ಕೆಲವು ಮಠಗಳಲ್ಲಿ ಸಮಾಜದ ಮುಖಂಡರೆಲ್ಲಾ ಸೇರಿ ಒಮ್ಮದಿಂತ ಪೀಠಾಧೀಪತಿಯನ್ನ ಆಯ್ಕೆ ಮಾಡಲಾಗುತ್ತೆ ಎಂದಿದ್ದಾರೆ.
ತೇಜಸ್ ಅವರನ್ನ ಕುಪ್ಪೂರು ಗದ್ದುಗೆ ಮಠದ ಉತ್ತರಾಧಿಕಾರಿಯಾಗಿದ್ದಾರೆ. ಹೆತ್ತವರು ಮಗನ ಬಗ್ಗೆ ಹಲವು ಕಸುಗಳನ್ನ ಕಟ್ಟಿಕೊಂಡಿದ್ದರು. ಅದ್ರೆ ವಿಧೀಯ ಆಟವೇ ಬೇರೆಯಾಗಿತ್ತು. ತೇಜಸ್ ಪ್ರಾಪ್ತ ವಯಸ್ಸಿಗೆ ಹಾಗೂ ವ್ಯಾಸಂಗ ಬಳಿಕ ಮಠಾಧಿಪತಿಯಾಗುವ ಅಥವಾ ತ್ಯಜಿಸುವ ವಿವೇಚನೆ ಅವರಿಗೆ ಬಿಡಲಾಗಿದೆ.. ಸದ್ಯ ತೇಜಸ್ ಅವರ ತಂದೆ ವಾಗೀಶ್ ಅವರೇ ಮಠದ ಸಂಪೂರ್ಣ ಜವಾಬ್ದಾರಿಯನ್ನ ನೋಡಿಕೊಳ್ಳುತಿದ್ದಾರೆ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು