ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟರ್‌ನಲ್ಲಿ ಇನ್ನು ಮುಂದೆ ಅಪರಿಚಿತರು ಬಂದ್ರೆ ಸಹಾಯ ಮಾಡೋದಿಲ್ಲ ಎಂದು ಬರೆದುಕೊಂಡಿದ್ದು, ಹೀಗೆ ಬರೆಯಲು ಕಾರಣ ಡ್ರೋಣ್ ಪ್ರತಾಪ್.

ಹೌದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಿವಾಸಿ 22 ವರ್ಷದ ಡ್ರೋಣ್ ಪ್ರತಾಪ್ ಎರಡು ವರ್ಷದಿಂದ ಎಲ್ಲೆಡೆ ಸಖತ್ ಫೇಮಸ್ ಆಗಿ, ದೇಶ ವಿದೇಶಗಳನ್ನ ಸುತ್ತಿ ಕೊನೆಗೆ ಪ್ರಧಾನಿ ಮೋದಿಯವರ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದ್ರೆ ಇದೀಗ ವೆಬ್‌ಸೈಟ್ ಒಂದು ಈತನ ಬಗ್ಗೆ ವರದಿ ಮಾಡಿದ್ದು, ಈತ ಮಾಡಿರುವ ಸಾಧನೆ ಬಗ್ಗೆ ಯಾವುದೇ ಪುರಾವೆ ಇಲ್ಲದ ಕಾರಣ ಪ್ರತಾಪ್ ಸಾಧನೆ ಸುಳ್ಳು ಎನ್ನಲಾಗಿದೆ.
ಈ ಸುದ್ದಿ ಕೇಳಿದ ನವರಸ ನಾಯಕ ಜಗ್ಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕಣ್ಣು ಕಿತ್ತರೂ ನಿದ್ದೆ ಬರಲಿಲ್ಲ ಇವನ ವಿಷಯ ಕೇಳಿ. ಇವನ ಬಗ್ಗೆ ಬರೆದಿದ್ದು ಪ್ರಯೋಜನವಿಲ್ಲಾ ಎಂದು ತೆಗೆದುಬಿಟ್ಟೆ. ಕಷ್ಟ ಅಂತ ಬಂದವರಿಗೆ ಭುಜ ಕೊಡುತ್ತಿದ್ದೆ. ಇನ್ನು ಮುಂದೆ ನನ್ನ ಬಳಿ ಯಾರು ಅನಾಮಿಕರು ಬಂದರೂ ನಂಬುವುದಿಲ್ಲ ಎಂದಿದ್ದಾರೆ.
ಅಲ್ಲದೇ, ತುತ್ತು ಸಿಕ್ಕರೂ ಪ್ರಾಮಾಣಿಕವಾಗಿ ದುಡಿದು ಗಳಿಸಬೇಕು. 57ನೇ ವಯಸ್ಸಿಗೆ ಹೊಸ ಪಾಠ ಕಲಿತೆ ಎಂದು ಜಗ್ಗೇಶ್ ಹೇಳಿದ್ದು, ಕಲಿಯುಗದಲ್ಲಿ ಯಾರನ್ನೂ ನಂಬಬಾರದು ಎಂದು ಜಗ್ಗೇಶ್ ಹೇಳಿದ್ದಾರೆ.
ತಾನು ಮುರಿದ ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಶನ್ ಬಳಸಿ ಪ್ರತಾಪ್ 600 ಡ್ರೋಣ್‌ಗಳನ್ನ ತಯಾರಿಸಿದ್ದೇ ಎಂದು ಹೇಳಿದ್ದ ಪ್ರತಾಪ್ ಬಗ್ಗೆ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಆದ್ರೆ ಇದೀಗ ಈ ಸಾಧನೆ ಶೂನ್ಯವೆಂದು ಇಂಡಿಯಾ ಹೋಪ್ ವೆಬ್‌ಸೈಟ್‌ನಲ್ಲಿ ಬಂದ ಬಳಿಕ, ಪ್ರತಾಪ್ ಮೇಲಿದ್ದ ಎಲ್ಲರ ನಂಬಿಕೆ ಸುಳ್ಳಾಗಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




