Friday, September 20, 2024

Latest Posts

ಹೈದರಾಬಾದ್‌ಗೆ ಹಾರಿದ ‘ಸೂಪರ್‌ ಮಚ್ಚಿ’ ರಚಿತಾರಾಮ್..!

- Advertisement -

ಕೊರೊನಾ ಕಾಟದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿತ್ತು. ಜನಜೀವನವೇ ಅಸ್ತವ್ಯಸ್ತವಾಗಿತ್ತು. ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಅಲ್ಲಿನ ಉದ್ಯೋಗಿಗಳು ವರ್ಕ್‌ ಫ್ರಮ್ ಹೋಮ್ ಮಾಡುವ ಹಾಗಾಗಿತ್ತು. ಅಷ್ಟೇ ಅಲ್ಲದೇ, ಧಾರಾವಾಹಿ, ಸಿನಿಮಾ ಶೂಟಿಂಗ್ ಕೂಡ ನಿಂತು ಹೋಗಿತ್ತು.

ಇತ್ತೀಚಿಗೆ ಕೆಲ ದಿನಗಳಿಂದ ಧಾರಾವಾಹಿ ಶೂಟಿಂಗ್ ಸ್ಟಾರ್ಟ್‌ ಆಗಿದೆ. ಆದ್ರೆ ಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್‌ಗೆ ಇನ್ನೂ ಅನುಮತಿ ನೀಡಲಾಗಿಲ್ಲ. ಆದ್ರೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಿದ್ದು, ನಟಿ ರಚಿತಾ ರಾಮ್ ಶೂಟಿಂಗ್‌ಗೆ ಹಾಜರಾಗಿದ್ದಾರೆ.

ಎಸ್.. ಅಪ್ಪಟ ಕನ್ನಡತಿ ರಚಿತಾ ರಾಮ್ ಈಗಾಗಲೇ ಕನ್ನಡದಲ್ಲಿ ಧಾರಾವಾಹಿಯಿಂದ ಹಿಡಿದು, ದರ್ಶನ್, ಸುದೀಪ್, ಶಿವಣ್ಣ, ಪುನೀತ್ ಹೀಗೆ ಎಲ್ಲ ಟಾಪ್ ಆ್ಯಕ್ಟರ್ಸ್ ಜೊತೆ ಹಿರಿತೆರೆಯಲ್ಲಿ ಬಣ್ಣ ಹಚ್ಚಿದ್ದು, ಪಕ್ಕದ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ತೆಲುಗು ಚಿತ್ರ ಸೂಪರ್ ಮಚ್ಚಿ ಎಂಬ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದು, ಹೈದರಾಬಾದ್‌ನಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದೆ. ಹಾಗಾಗಿ ರಚಿತಾ ರಾಮ್ ಕೊರೊನಾ ಭೀತಿಯಲ್ಲೂ ರಿಸ್ಕ್ ತೆಗೆದುಕೊಂಡು ಶೂಟಿಂಗ್‌ಗೆ ಹಾಜರಾಗಿದ್ದಾರೆ.

ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಾಯಕ ನಟನಾಗಿ ನಟಿಸುತ್ತಿದ್ದು, ಪುಲಿ ವಾಸು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೂಪರ್‌ ಮಚ್ಚಿ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಕೊನೆಯ ಹಂತದ ಶೂಟಿಂಗ್ ಇನ್ನೇನು ಮುಗಿಯಬೇಕು ಎನ್ನುವಲ್ಲಿ ಕೊರೊನಾ ವಕ್ಕರಿಸಿ ಲಾಕ್‌ಡೌನ್ ಆಗಿಹೋಯಿತು. ಈ ಕಾರಣಕ್ಕೆ ಕೊನೆಯ ಹಂತದ ಶೂಟಿಂಗ್ ಮುಗಿಸುವ ಸಲುವಾಗಿ ರಚಿತಾ ಹೈದ್ರಾಬಾದ್‌ಗೆ ಹಾರಿದ್ದಾರೆ.

- Advertisement -

Latest Posts

Don't Miss