ದಕ್ಷಿಣ ಭಾರತದ ಸಿನಿ ಸ್ಟಾರ್‌ಗಳನ್ನ ಹಿಂದಿಕ್ಕಿ 25 ಮಿಲಿಯನ್ ಅಂದ್ರೆ ಎರಡುವರೆ ಕೋಟಿ ಫಾಲೋವರ್ಸ್ ಪಡೆದುಕೊಳ್ಳುವುದರಲ್ಲಿ ರಶ್ಮಿಕಾ ಸಕ್ಸಸ್ ಆಗಿದ್ದಾರೆ. ರಶ್ಮಿಕಾ ಈಗ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದು, ಟಾಪ್ ಸ್ಟಾರ್ಸ್ ಜೊತೆ ನಟಿಸುತ್ತಿದ್ದಾರೆ. ಇದೀಗ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಎರಡುವರೆ ಕೋಟಿಗೆ ತಲುಪಿದ್ದು, ಈ ಖುಷಿಯನ್ನ ರಶ್ಮಿಕಾ ಸಂಭ್ರಮಿಸಿದ್ದಾರೆ.
https://www.instagram.com/p/CXwDAlspGXw/
ಈ ಬಗ್ಗೆ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದು, ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ವೇಟ್ ವೇಟ್ ವೇಟ್, ನಾನು ಮರಿಯೋದಕ್ಕೆ ಮುಂಚೆ… ನನ್ನ ಕುಟುಂಬಸ್ಥರ ಸಂಖ್ಯೆ 25 ಮಿಲಿಯನ್ ಇದ್ದು ಈಗ 25.8 ಮಿಲಿಯನ್ ಆಗಿದೆ. ನಾವಿದನ್ನು ಸೆಲೆಬ್ರೇಟ್ ಮಾಡೋಣ. ಐ ಲವ್ ಯೂ. ಅಂತಾ ಬರೆದುಕೊಂಡಿದ್ದಾರೆ.
ಸೌತ್ ಇಂಡಸ್ಟ್ರಿಯ ಹೆಸರಾಂತ ನಟರ ಜೊತೆ ನಟಿಸಿರುವ ರಶ್ಮಿಕಾ, ಸಧ್ಯಕ್ಕೆ ತೆಲುಗು ಚಿತ್ರರಂಗದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮೊನ್ನೆಯಷ್ಟೇ ರಶ್ಮಿಕಾ ನಟನೆಯ ಪುಷ್ಪಾ ಸಿನಿಮಾ ತೆರೆಕಂಡಿದ್ದು, ಈ ಮೂಲಕ ರಶ್ಮಿಕಾ ಪ್ಯಾನ್ ಇಂಡಿಯನ್ ಸಿನಿಮಾದ ನಟಿಯಾಗಿದ್ದಾರೆ. ಮೊನ್ನೆ ತಾನೇ ಇಂಟರ್ವ್ಯೂವೊಂದರಲ್ಲಿ ರಶ್ಮಿಕಾ ಕಳೆದು ಹೋದ ದಿನಗಳ ಬಗ್ಗೆ ಹೇಳಿ, ಬೇಸರಪಟ್ಟುಕೊಂಡಿದ್ದರು. ತಾನು ತನಗಾಗುವ ಅವಮಾನ ನೆನೆದು, ನನ್ನ ಹಳೆಯ ದಿನಗಳನ್ನು ನೆನೆದು ಹಲವು ಬಾರಿ ಕಣ್ಣೀರು ಹಾಕಿದ್ದೇನೆ. ಆದ್ರೆ ನಾನೀಗ ಅದಕ್ಕೆಲ್ಲ ಚಿಂತಿಸುವುದಿಲ್ಲ. ಏನಿದ್ದರೂ ನಗು ನಗುತ್ತ ಮುನ್ನಡೆಯುತ್ತೇನೆಂದು ಹೇಳಿದ್ದಾರೆ.

