Wednesday, October 15, 2025

Latest Posts

ಉಡುಪಿನ ವಿಷಯದಲ್ಲಿ ಪದೇ ಪದೇ ಟ್ರೋಲ್ ಆಗುತ್ತಿರುವ ರಶ್ಮಿಕಾ..

- Advertisement -

ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿರುವ ರಶ್ಮಿಕಾ ಮಂದಣ್ಣ, ಪುಷ್ಪಾ ಸಿನಿಮಾ ರಿಲೀಸ್ ಆದ ಬಳಿಕ, ಸಖತ್ ಆಗೇ ಟ್ರಿಪ್ ಹೊಡೆಯುತ್ತಿದ್ದಾರೆ. ಈಗಾಗಲೇ ಪ್ಯಾರಿಸ್‌ಗೆ ಟ್ರಿಪ್ ಹೋಗಿ ಬಂದ ರಶ್ಮಿಕಾ,  ಕೆಲವು ಬಾರಿ ವಿಜಯ್ ದೇವರಕೊಂಡ ಜೊತೆನೂ ಕಾಣಿಸಿಕೊಂಡಿದ್ರು. ಆಗಲೂ ಅಷ್ಟೇನೂ ಟ್ರೋಲ್ ಆಗದ ರಶ್ಮಿಕಾ, ಇತ್ತೀಚೆಗೆ ಬಟ್ಟೆ ವಿಷಯದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ.

ಫೇಮ್ ಹೆಚ್ಚಾದ ಹಾಗೆ, ರಶ್ಮಿಕಾರ ಉಡುಪು ಕಡಿಮೆಯಾಗುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಟೀ ಶರ್ಟ್ ಜೊತೆ ಶಾರ್ಟ್ಸ್ ಧರಿಸುವ ರಶ್ಮಿಕಾ, ಟ್ರೋಲಿಗರಿಗೆ ಆಗಾಗ ಆಹಾರವಾಗುತ್ತಲೇ ಇದ್ದಾರೆ. ಅಲ್ಲದೇ ಕೆಲ ಕಾರ್ಯಕ್ರಮಗಳಿಗೆ ಬರುವ ರಶ್ಮಿಕಾ, ಸೀರೆ ಉಟ್ಟರೂ ಮೈ ಕಾಣುವಂತೆ ಸೀರೆ ಉಟ್ಟಿದ್ದರು. ಹೀಗಾಗಿಯೇ, ನೆಟ್ಟಿಗರು ಇದು ನಮ್ಮ ಸಂಸ್ಕೃತಿ ಅಲ್ಲವೆಂದು ಹೇಳಿದ್ದರು. ಅಲ್ಲದೇ, ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ ಟೀ ಶರ್ಟ್ ಮತ್ತು ಶಾರ್ಟ್ಸ್ ಹಾಕಿಕೊಂಡಿದ್ದು, ಈ ಬಗ್ಗೆ ಕೂಡ ನೆಟ್ಟಿಗರು, ರಶ್ಮಿಕಾ ಮಂದಳನ್ನ ಆಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ ನಟಿಸಿದ್ದ ನಟಿ, ಇದೀಗ ಪುಷ್ಪಾ ಪಾರ್ಟ್ ಟೂನಲ್ಲಿ ನಟಿಸೋಕ್ಕೆ ರೆಡಿಯಾಗಿದ್ದಾರೆ. ಅಲ್ಲದೇ, ಬಾಲಿವುಡ್, ತಮಿಳು ಫಿಲ್ಮ್ ಇಂಡಸ್ಟ್ರಿಯಲ್ಲಿಯೂ ರಶ್ಮಿಕಾಗೆ ಆಫರ್‌ಗಳ ಸುರಿಮಳೆಯಾಗುತ್ತಿದೆ. ಆ್ಯಡ್‌ಗಳಲ್ಲೂ ರಶ್ಮಿಕಾ ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ಟ್ರೋಲ್ ಮೇಲೆ ಟ್ರೋಲ್ ಆಗುತ್ತಲೇ ಇದ್ದರೂ, ರಶ್ಮಿಕಾ ಮಾತ್ರ ಅಭಿಮಾನಿಗಳ ಸಂಖ್ಯೆಯನ್ನ ಏರಿಸಿಕೊಳ್ಳುತ್ತಲೇ ಇದ್ದಾರೆ.

- Advertisement -

Latest Posts

Don't Miss