ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇಂದಿನ ಕೊರೊನಾ ಸೋಂಕಿತರ ಸಂಖ್ಯೆಯನ್ನ ನೀವು ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ. ಯಾಕಂದ್ರೆ ಇಂದು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5 ಸಾವಿರ ದಾಟಿದೆ.

ಇಂದು ಬೆಂಗಳೂರಿನಲ್ಲೇ 2,207 ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ರಾಜ್ಯದಲ್ಲಿ 5030 ಜನರಿಗೆ ಕೊರೋನಾ ಇರುವುದು ಧೃಡಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ 80, 863 ಜನ ಕೊರೊನಾಗೆ ಒಳಗಾಗಿರುವುದು ಗೊತ್ತಾಗಿದೆ. ಇನ್ನು ರಾಜ್ಯದಲ್ಲಿ 97 ಜನ ಮೃತಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು 1616 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಅಂತೆಯೇ ಕೊರೊನಾ ಸೋಂಕಿತರು ಚೇತರಿಕೆ ಹೊಂದಿ ಮನೆಗೆ ತೆರಳುವ ಪ್ರಮಾಣ ಕೂಡಾ ಉತ್ತಮವಾಗಿದ್ದು, 2071 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 29,310 ಮಂದಿ ಕೊರೊನಾ ವಿರುದ್ಧ ಜಯಸಾಧಿಸಿದ್ದಾರೆ. ಸದ್ಯ 49,931 ಸಕ್ರೀಯ ಪ್ರಕರಣಗಳಿದೆ. 640 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 22017, ಬೆಂಗಳೂರು ಗ್ರಾಮಾಂತರದಲ್ಲಿ 161, ಬಳ್ಳಾರಿಯಲ್ಲಿ 164, ರಾಯಚೂರಿನಲ್ಲಿ 258, ದಕ್ಷಿಣ ಕನ್ನಡದಲ್ಲಿ 218, ಕಲಬುರಗಿಯಲ್ಲಿ 229, ಉಡುಪಿಯಲ್ಲಿ 160, ಮೈಸೂರಿನಲ್ಲಿ 116, ಹಾಸನದಲ್ಲಿ 108, ಬೆಳಗಾವಿಯಲ್ಲಿ 214, ದಾವಣಗೆರೆಯಲ್ಲಿ 107, ಬಾಗಲಕೋಟೆಯಲ್ಲಿ 106 ಪ್ರಕರಣಗಳು, ಬೀದರ್‌ನಲ್ಲಿ 94, ಉತ್ತರ ಕನ್ನಡದಲ್ಲಿ 83, ಶಿವಮೊಗ್ಗದಲ್ಲಿ 82, ಗದಗದಲ್ಲಿ 72, ಚಿಕ್ಕಬಳ್ಳಾಪುರದಲ್ಲಿ 65, ಚಿಕ್ಕಮಗಳೂರಿನಲ್ಲಿ 62, ತುಮಕೂರಿನಲ್ಲಿ 56, ಯಾದಗಿರಿಯಲ್ಲಿ 55, ಮಂಡ್ಯದಲ್ಲಿ 50, ಕೋಲಾರದಲ್ಲಿ 40, ಚಾಮರಾಜನಗರದಲ್ಲಿ 27, ರಾಮನಗರದಲ್ಲಿ 26, ಕೊಡಗಿನಲ್ಲಿ 22, ವಿಜಯಪುರದಲ್ಲಿ 20, ಹಾವೇರಿಯಲ್ಲಿ 18, ಕೊಪ್ಪಳದಲ್ಲಿ 17, ಚಿತ್ರದುರ್ಗದಲ್ಲಿ 10 ಕೊರೊನಾ ಪ್ರಕರಣಗಳು ಕಂಡುಬಂದಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

