ಬೆಂಗಳೂರು: ಈ ಕೊರೊನಾ ಮಹಾಮಾರಿಯಿಂದ ಜನರ ಬದುಕೇ ಬರ್ಬರವಾಗಿದೆ. ಎಷ್ಟೋ ಕಂಪನಿಗಳು ನಷ್ಟದ ನೆಪ ಹೇಳಿ ಕೆಲಸಗಾರರನ್ನ ಕೆಲಸದಿಂದ ತೆಗೆಯುತ್ತಿದೆ. ಎಷ್ಟೋ ಅಂಗಡಿ ಮುಂಗಟ್ಟಿಗಳು ವ್ಯಾಪಾರವಿಲ್ಲದೇ, ಬಾಗಿಲು ಮುಚ್ಚಿವೆ. ಇನ್ನು ಕೆಲವು ಅಂಗಡಿ ಬಾಡಿಗೆ ಕೊಡಲಾಗದೆ ಜನ ಮನೆ ಮಠ ಮಾಡಿ ಬೀದಿಗೆ ಬಂದಿದ್ದಾರೆ. ಇಂಥ ಸಮಯದಲ್ಲಿ ಬೆಂಗಳೂರಿನಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಕರೋನಾ ಲಾಕ್ ಡೌನ್ ಪರಿಣಾಮ ಕೆಲಸವಿಲ್ಲದೇ ನೇಕಾರ ನೇಣಿಗೆ ಶರಣಾಗಿದ್ದಾನೆ. ಲಾಕ್ ಡೌನ್ ನಿಂದ ಬದುಕು ನಡೆಸುವುದು ದುಸ್ತರವಾಗಿತ್ತು. ಇನ್ನೊಂದೆಡೆ ತಂದೆ ತಾಯಿಗೆ ವಯಸ್ಸಾಗಿದ್ದ ಕಾರಣ ಮಕ್ಕಳು ಪೋಷಕರನ್ನು ತೊರೆದಿದ್ದರು. ಈ ಕಾರಣಕ್ಕೆ ಗಂಡ ಹೆಂಡತಿ ಇಬ್ಬರೇ ವಾಸಿಸುತ್ತಿದ್ದರು. ಸದ್ಯ ಲಾಕ್ ಡೌನ್ ಕಾರಣದಿಂದ ಹೊಟ್ಟೆಪಾಡಿಗೂ ಕಷ್ಟವಾಗಿತ್ತು.
ಈ ಕಾರಣಕ್ಕೆ ಮನನೊಂದು ನೇಕಾರ ಲಕ್ಷ್ಮೀಪತಿ(೫೫) ಮಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 25 ವರ್ಷಗಳಿಂದ ಈ ದಂಪತಿ, ಅಗ್ರಹಾರದಲ್ಲೆ ವಾಸವಿದ್ದಾರೆ. ಹೆಂಡತಿ ಬೆಳಗ್ಗೆ 7-30 ಕ್ಕೆ ಸೊಪ್ಪುತರಲು ಆಚೆ ಹೋಗಿದ್ದಾಗ ಲಕ್ಷ್ಮೀಪತಿ ಇಂಥ ಕೆಲಸ ಮಾಡಿಕೊಂಡಿದ್ದಾರೆ. ಇನ್ನು ಮಗ್ಗ(ನೇಕಾರಿಕೆ) ಅರ್ಧ ಸೀರೆ ನೇಯುತ್ತ, ಅಲ್ಲೇ ಲಕ್ಷ್ಮೀಪತಿ ನೇಣಿಗೆ ಶರಣಾಗಿದ್ದಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಅಗ್ರಹಾರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಸಂಪಿಗೆಹಳ್ಳಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

