ಕೆಲ ದಿನಗಳಿಂದ ಹಾಸ್ಯನಟ ಚಿಕ್ಕಣ್ಣ ಮತ್ತು ಕಾನ್ಸ್ಟೇಬಲ್ ಸರೋಜಾ ಖ್ಯಾತಿಯ ತ್ರೀವೇಣಿ ರಾವ್ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿತ್ತು.
ಅಷ್ಟೇ ಅಲ್ಲದೇ, ತ್ರಿವೇಣಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿಕ್ಕಣ್ಣ ಮತ್ತು ತ್ರಿವೇಣಿ ವಧುವರರ ಉಡುಪಿನಲ್ಲಿರುವ ಫೋಟೋ ಕೂಡ ಅಪ್ಲೋಡ್ ಆಗಿತ್ತು. ಈ ಕಾರಣಕ್ಕೆ ತ್ರಿವೇಣಿ ಮತ್ತು ಚಿಕ್ಕಣ್ಣ ಗುಟ್ಟಾಗಿ ಮದುವೆಯಾದ್ರಾ ಅನ್ನೋ ಪ್ರಶ್ನೆ ಕೂಡಾ ಹಲವರಲ್ಲಿ ಮೂಡಿತ್ತು. ಈ ಎಲ್ಲಾ ಊಹಾಪೋಹಗಳಿಗೆ ತಮ್ಮ ಇನ್‌ಸ್ಟಾ ಮೂಲಕ ತ್ರೀವೇಣಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ತ್ರಿವೇಣಿ, ನಮಸ್ಕಾರ ನಾನು ನಿಮ್ಮ ಟಗರು ಸರೋಜಾ ಮಾತಾಡ್ತಿರೋದು, ಇದೇ ತಿಂಗಳು ಚಿಕ್ಕಣ್ಣ ಅವರ ಬರ್ತ್‌ಡೇ ಇತ್ತು. ಬರ್ತ್‌ಡೇ ದಿನ ನಾನೊಂದು ಪೋಸ್ಟ್ ಶೇರ್ ಮಾಡಿದ್ದೆ. ಆ ಪೋಸ್ಟ್ ನೋಡಿ, ನನಗೆ ಮತ್ತು ಚಿಕ್ಕಣ್ಣನಿಗೆ ಮದುವೆ ಆಗಿದೆ ಅಂತಾ, ಸೋಶಿಯಲ್ ಮೀಡಿಯಾದಲ್ಲಿ, ಟಿಕ್ ಟಾಕ್‌ನಲ್ಲಿ ಟ್ರೋಲ್ ಮಾಡುವರು ಹರಿಡಿಸಿದ್ದಾರೆ. ಇದು ಸುಳ್ಳು ಸುದ್ದಿ, ಯಾವುದೇ ರೀತಿಯಲ್ಲಿ ಆಫಿಶಿಯಲ್ ಆಗಿ ನನಗೆ ಚಿಕ್ಕಣ್ಣರಿಗೆ ಮದುವೆ ಆಗಿಲ್ಲ. ಇದೊಂದು ಸಿನಿಮಾದಲ್ಲಿ ಬರುವಂಥ ಸನ್ನಿವೇಶ. ಸೋ ಇದನ್ನ ಯಾರೂ ನಂಬಬೇಡಿ. ಖಂಡಿತ ನಾನು ಮದುವೆಯಾಗುವಾಗ ಆಫಿಶಿಯಲ್ ಆಗಿ ಹೇಳಿ ನಾನು ಮದುವೆಯಾಗ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಇದೇ ತರ ಇರಲಿ, ನಿಮ್ಮ ಪ್ರೀತಿಯ ಸರೋಜ, ಸ್ಟೇ ಹೋಮ್ ಸ್ಟೇ ಸೇಫ್ ಎಂದಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಲು ಬಂಂದಿದ್ದ ತ್ರಿವೇಣಿಗೆ ಟಗರು ಸಿನಿಮಾ ಅದೃಷ್ಟ ತಂದುಕೊಟ್ಟಿತ್ತು. ತ್ರಿವೇಣಿ ಬದಲು ಅವರೀಗ ಕಾನ್‌ಸ್ಟೇಬಲ್ ಸರೋಜಾ ಅಂತಲೇ ಖ್ಯಾತಿ ಪಡೆದಿದ್ದಾರೆ. ಅಲ್ಲದೇ, ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಆಫರ್ ಗಿಟ್ಟಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೇ, ತ್ರಿವೇಣಿ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ನಟಿಸುವಾಗ ತ್ರಿವೇಣಿಗೆ ದೆವ್ವ ಹಿಡಿದಿತ್ತು ಎಂದು ಗಾಳಿ ಸುದ್ದಿ ಹಬ್ಬಿತ್ತು. ಆದ್ರೆ ಇದನ್ನ ನಿರಾಕರಿಸಿದ್ದ ತ್ರಿವೇಣಿ, ನಾನು ದೆವ್ವ ಭೂತಗಳನ್ನೆಲ್ಲ ನಂಬುವುದಿಲ್ಲ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರದಲ್ಲಿ ಹಾರರ್ ಸೀನ್ ಒಂದಿತ್ತು. ಆದಕ್ಕಾಗಿ ಎರಡು ದಿನದಿಂದ ಪ್ರ್ಯಾಕ್ಟೀಸ್ ಮಾಡಿದ್ದೆ, ಹಾಗಾಗಿ ಅದೇ ಡೈಲಾಗ್ ಹೇಳಿದ್ದೇ, ಆದರೆ ಜನ ಅದನ್ನ ತಪ್ಪಾಗಿ ತಿಳಿದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.