ಗಡಿಯಲ್ಲಿ ಉದ್ಧಟತನ ತೋರ್ತಾ ಇರೋ ಚೀನಾಗೆ ಭಾರತ ಒಂದಿಲ್ಲೊಂದು ಆಘಾತವನ್ನ ಕೊಡ್ತಾನೇ ಇದೆ. ಈ ಹಿಂದೆಯೂ 2 ಬಾರಿ ಚೀನಿ ಆಪ್ಗಳನ್ನ ಬ್ಯಾನ್ ಮಾಡಿದ್ದ ಕೇಂದ್ರ ನಿನ್ನೆಯೂ 118 ಆಪ್ಗಳಿಗೆ ತಿಲಾಂಜಲಿ ಹಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಚೀನಾದ ಕಣ್ಣು ಕೆಂಪಗಾಗಿಸಿದೆ.
ಭಾರತದಲ್ಲಿ ಚೀನಾ ಆಪ್ ಬ್ಯಾನ್ ವಿಚಾರವಾಗಿ ಪ್ರತಿಕ್ರಯಿಸಿದ ಚೀನಾ ವಾಣಿಜ್ಯ ಸಚಿವಾಲಯ ಈ ಕೂಡಲೇ ಭಾರತ ತನ್ನ ತಪ್ಪನ್ನ ಸರಿ ಮಾಡಿಕೊಳ್ಳಬೇಕು ಅಂತಾ ಎಚ್ಚರಿಕೆ ನೀಡಿದೆ. ಭಾರತದ ಈ ಕ್ರಮವು ಚೀನಾದ ಹೂಡಿಕೆದಾರರ ಮೇಲೆ ಪರಿಣಾಮ ಬೀರ್ತಿದೆ ಹೀಗಾಗಿ ಭಾರತ ಈ ರೀತಿಯ ಕ್ರಮ ಕೈಗೊಳ್ಳೋದು ಸಹಿಸಲಸಾಧ್ಯ ಅಂತಾ ಚೀನಾ ವಾಣಿಜ್ಯ ಇಲಾಖೆ ವಕ್ತಾರ ಗಾವೋ ಫೆಂಗ್ ಹೇಳಿದ್ದಾರೆ
.
ಚೀನಾ ಆಪ್ಗಳು ಬಳಕೆದಾರರ ಮಾಹಿತಿ ಸೋರಿಕೆ ಮಾಡುತ್ತಿವೆ ಎಂಬ ಆರೋಪ ಹಿನ್ನೆಲೆ ಕೇಂದ್ರ ಸರ್ಕಾರ ಟಿಕ್ಟಾಕ್, ಪಬ್ ಜಿ , ಶೇರ್ ಇಟ್ ಸಾಕಷ್ಟು ಆಪ್ಗಳನ್ನ ಭಾರತದಲ್ಲಿ ಬ್ಯಾನ್ ಮಾಡಿದೆ.