ಕನ್ನಡತಿ ಸಿರಿಯಲ್‌ನಲ್ಲಿ ಬರುವ ವಿಶೇಷ ಪಾತ್ರವೆಂದರೆ ವರುಧಿನಿಯ ಪಾತ್ರ. ಮನಸ್ಸಿಗೆ ಬಂದಂತೆ ಬಿಂದಾಸ್ ಆಗಿರುವ ಹುಡುಗಿ ತನ್ನ ಪ್ರಿಯಕರನ ವಿಷಯ ಬಂದಾಗ ವಿಚಿತ್ರವಾಗಿ ವರ್ತಿಸ್ತಾಳೆ. ಇಂಥ ಚಾಲೆಂಜಿಂಂಗ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ವರುಧಿನಿಯ ನಿಜವಾದ ಹೆಸರು ಸಾರಾ ಅಣ್ಣಯ್ಯಾ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಸಾರಾ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಈಗ ಕನ್ನಡತಿ ಸಿರಿಯಲ್‌ನಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.
https://www.instagram.com/reel/CXK3bckISUx/
ಮಾಡರ್ನ್ ಡ್ರೆಸ್‌ನಲ್ಲೂ ಸೈ. ಟ್ರೆಡಿಶನಲ್ ಡ್ರೆಸ್‌ನಲ್ಲೂ ಸೈ ಎನ್ನಿಸಿಕೊಂಡಿರು ವರು, ಎಕ್ಸ್‌ಪ್ರೆಷನ್ ಕೂಡಾ ಸಖತ್ ಆಗೇ ಕೊಡ್ತಾರೆ. ಕನ್ನಡತಿ ಶೂಟಿಂಗ್ ವೇಳೆ ಬಿಡುವಿದ್ದಾಗ ಸಾರಾ, ತನ್ನ ಸಹೊದ್ಯೋಗಿಗಳ ಜೊತೆ ಸೇರಿ ಡಬ್ ಸ್ಮ್ಯಾಶ್ ಮಾಡ್ತಾರೆ. ಅದನ್ನ ಇನ್‌ಸ್ಟಾದಲ್ಲೂ ಅಪ್ಲೋಡ್ ಮಾಡ್ತಾರೆ. ಸಾರಾ ಅಪ್ಲೋಡ್ ಮಾಡಿದ ವೀಡಿಯೋ ನೋಡೋಕ್ಕೆ ಅಂತಾನೇ ಕಾಯ್ತಿರೋ ಅವ್ರ ಫ್ಯಾನ್ಸ್, ಸಾರಾ ಎಕ್ಸ್‌ಪ್ರೆಶನ್‌ಗೆ ಫುಲ್ ಫೀದಾ ಆಗಿದ್ದಾರೆ.
https://www.instagram.com/reel/CXASNUtIF9b/
ಈ ವೀಡಿಯೋದಲ್ಲಿ ವರು, ಅಮ್ಮಮ್ಮನ ಜೊತೆ ಹೆಜ್ಜೆ ಹಾಕಿದ್ದು, ನೋಡೋಕ್ಕೆ ಸಖತ್ ಮಜವಾಗಿದೆ. ಈ ವೀಡಿಯೋನಾ 4.4 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಮತ್ತು 1 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
https://www.instagram.com/reel/CV2EWvaqmJZ/
ಈ ವೀಡಿಯೋ ಅಂತೂ ಸಖತ್ ಮಜವಾಗಿದೆ. ಈಗಿನ ಟ್ರೆಂಡ್ ಆಗಿರುವ ಈ ವೀಡಿಯೋಗೆ ವರುಧಿನಿ, ಹರ್ಷನ ಕಾರ್ ಬಳಿ ನಿಂತು ಪೋಸ್ ಕೊಡ್ತಾ ಇದ್ರು. ಅಷ್ಟೊತ್ತಿಗೆ ಬಂದ ಹರ್ಷ ಹಾರ್ನ್ ಹಾಕಿ, ಏ.. ಸರಿರೀ ಅಂದ ಹಾಗಿತ್ತು..
https://www.instagram.com/reel/CW2Ry79IVYP/
ಇದು ಬಿಂದು ಜೊತೆ ಡಾನ್ಸ್ ಮಾಡಿದ ವೀಡಿಯೋ, ಇದರಲ್ಲಿ ವರು ಮತ್ತು ಬಿಂದು ಕೊಡುವ ಎಕ್ಸ್‌ಪ್ರೆಷನ್ ಕ್ಯೂಟ್ ಕ್ಯೂಟ್ ಆಗಿದೆ. ಇಷ್ಟೇ ಅಲ್ಲದೇ ವರುಧಿನಿ ಫೋಟೋ ಶೂಟ್ ಕೂಡ ಮಾಡಿಸಿದ್ದು, ಸಖತ್ ಹಾಟ್ ಆಗಿ ಕಾಣಿಸ್ತಿದ್ದಾರೆ.
https://www.instagram.com/reel/CSwNjwElb_W/
ಈ ವೀಡಿಯೋ ಅಂತೂ, ಹರ್ಷ ಅವರಿಗೆ ನಗುನೇ ತರಿಸಿ ಬಿಡ್ತು. ಒಟ್ಟಾರೆ ವರುಧಿನಿ ಶೂಟಿಂಗ್ ಟೌಮಲ್ಲಿ ಬಿಡುವು ಸಿಕ್ಕಾಗ, ಆ ಸಮಯವನ್ನ ಸಖತ್ ಆಗಿ ಎಂಜಾಯ್ ಮಾಡ್ತಾರೆ.
https://www.instagram.com/reel/CRx_rQODdNU/