ಮಂಡ್ಯ: ಮಂಡ್ಯದಲ್ಲಿ ಮಹಾರಾಮಾರಿ ಕೊರೊನಾ ಅಟ್ಟಹಾಸ ಹಿನ್ನೆಲೆ ಕೊರೋನಾ ನಿವಾರಣೆಗೆ ಗ್ರಾಮಸ್ಥರು ಗ್ರಾಮ ದೇವರ ಮೋರೆಹೋಗಿದ್ದಾರೆ. ಗ್ರಾಮ ದೇವರಿಗೆ ಕುರಿ, ಮೇಕೆ, ಕೋಳಿ ಬಲಿಕೊಟ್ಟು ಪೂಜೆ ಸಲ್ಲಿಸಿದ್ದಾರೆ.

ಮದ್ದೂರು ತಾಲೂಕು ಬಸವೇನಗೌಡನದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಸವೇಗೌಡನದೊಡ್ಡಿ ಗ್ರಾಮಸ್ಥರಿಂದ ಬಲಿ ಕೊಟ್ಟು ಕೊರೊನಾ ನಿವಾರಣೆ ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಲಾಗಿದೆ.
ಮಂಡ್ಯ: ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನಲೆ, ಜಿಲ್ಲಾಧಿಕಾರಿ ಕಚೇರಿ ಎದುರು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ, ಜಿ.ಪಂ.ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಇಓ ಯಾಲಕ್ಕಿಗೌಡ ಚಾಲನೆ ನೀಡಿದರು.
ವಿಪತ್ತಿನಲ್ಲಿಯು ಕುಟುಂಬ ಯೋಜನೆಯ ತಯಾರಿ ಸಧೃಡ ರಾಷ್ಟ್ರ ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ಎಂಬ ಘೋಷಣೆ ಕೂಗುತ್ತಾ, ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು
ಜಾಥಾ ಕಾರ್ಯಕ್ರಮದಲ್ಲಿ ಡಿಎಚ್ಒ ಮಂಚೇಗೌಡ, ಡಿಎಚ್ಒ ಹಾಗೂ ಇತರೆ ಅಧಿಕಾರಿಗಳು ಭಾಗಿಯಾಗಿದ್ರು.
ಮಂಡ್ಯ: ಮಂಡ್ಯ ವಾರ್ತಾಭವನದ ಸಿಬ್ಬಂದಿಗಳಿಗೂ ಕೊರೊನಾ ಭೀತಿ ಎದುರಾಗಿದ್ದು, ಮಂಡ್ಯ ವಾರ್ತಾ ಭವನ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.
ಕಚೇರಿಯ ಒಳಾಂಗಣ ಮತ್ತು ಹೊರಾಂಗಣ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಅಧಿಕಾರಿ ಹಾಗೂ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಕಚೇರಿಗೆ ನಗರಸಭೆ ಪೌರ ಕಾರ್ಮಿಕರಿಂದ ಸ್ಯಾನಿಟೈಸ್ ಮಾಡಲಾಯಿತು.
ಪ್ರಸನ್ನ, ಕರ್ನಾಟಕ ಟಿವಿ, ಮಂಡ್ಯ


