ಮಂಡ್ಯ: ಮೈಷುಗರ್ ಕಾರ್ಖಾನೆಗೆ ಸಬಂಧಿಸಿದಂತೆ ಶ್ರೀಮತಿ ಸುನಂದಾ ಜಯರಾಮ್,ಶ್ರೀಮತಿ ಕುಮಾರಿ ಹಾಗೂ ಸಂಘಟಕರು ಸರ್ಕಾರದ ಪರವಾಗಿ ಕಾರ್ಖಾನೆ ನಡೆಸಬೇಕೆಂದು ಪಾಂಪ್ಲೆಟ್ ಹಂಚುತ್ತಿರುವಾಗ O and M ಮಾಡುವುದೇ ಸರಿ ಎಂದು ಪಾಂಪ್ಲೆಟ್ ಹಂಚುತ್ತಿದ್ದವರಿಗೆ ಸಾರ್ವಜನಿಕರು ತಿರುಗಿಬಿದ್ದ ಘಟನೆ ನಡೆಯಿತು.

ಇನ್ನೊಂದೆಡೆ ಪಾಂಡವಪುರ ಪಟ್ಟಣದ ಬಸವನಗುಡಿ ಬೀದಿಯ ನಿವಾಸಿಗೆ ಕೊರೊನೊ ಪಾಸಿಟೀವ್ ಧೃಡಪಟ್ಟಿದೆ. ಈ ಹಿನ್ನೆಲೆ ಪಾಂಡವಪುರ ಪಟ್ಟಣದ ಬಸವನಗುಡಿ ಬೀದಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಪಾಂಡವಪುರ ಪಟ್ಟಣದ ಬಸವನಗುಡಿ ಬೀದಿ ಸುತ್ತಮುತ್ತ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿದೆ. ಗುರುವಾರ ದಿನ ಸಂತೆ ನಡೆಯುತ್ತಿತ್ತು, ಕೊರೊನೊ ದೃಢ ಪ್ರಯುಕ್ತ ಸಂತೆಯನ್ನು ರದ್ದುಗೊಳಿಸಲಾಯಿತು. ಸ್ಥಳಕ್ಕೆ ತಹಶೀಲ್ದಾರ್ ಪ್ರಮೋದ್ ಪಾಟೀಲ್, ಸರ್ಕಲ್ ಇನ್ಸ್ ಪೆಕ್ಟರ್ ಪ್ರಭಾಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಕಂಪನಿ ಮಾಲೀಕ ಬಿಜೆಪಿ ಶಾಸಕ ಮುರುಗೇಶ್ ನಿರಾಣಿಗೆ 40 ವರ್ಷಗಳ ಕಾಲ ಗುತ್ತಿಗೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಇಂದು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ, ಮುರುಗೇಶ್ ನಿರಾಣಿ ಹಿತೈಷಿ ಬಳಗದ ಮುಖಂಡ ಹಾಗೂ ಬಿಜೆಪಿ ಮುಖಂಡ ಆನಂದ್ ನೇತೃತ್ವದಲ್ಲಿ ಕಾರ್ಮಿಕರು ಕಾರ್ಖಾನೆ ಮುಂಭಾಗದಲ್ಲಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಮುರುಗೇಶ್ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಎಂಪ್ಲಾಯ್ ಅಸೋಸಿಯೇಷನ್ ಅಧ್ಯಕ್ಷ ಮುದ್ದುಕೃಷ್ಣ, ಉಪಾಧ್ಯಕ್ಷ ರಮೇಶ, ಕಾರ್ಯದರ್ಶಿ ಬಿ.ಟಿ.ಮಂಜು, ಪುಟ್ಟಮಾದೇಗೌಡ, ನಾಗಣ್ಣ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ


