ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಮದುವೆ ಸುದ್ದಿನೇ ಹೆಚ್ಚು ಕೇಳ್ತಿರೋದು. ಈ ವರ್ಷ ನಿವೇದಿತಾ ಗೌಡ- ಚಂದನ್ ಶೆಟ್ಟಿ, ಅಶ್ವಿನಿನಕ್ಷತ್ರ ಖ್ಯಾತಿಯ ಮಯೂರಿ, ನಿಖಿಲ್- ರೇವತಿ, ಚೇತನ – ಮೇಘಾ ಸಪ್ತಪದಿ ತುಳಿದಿದ್ದಾರೆ. ಇನ್ನು ನಟಿ ಶುಭಪುಂಜಾ ಕೂಡ ಮದುವೆಗೆ ರೆಡಿಯಾಗಿದ್ದಾರೆ. ಇದೀಗ ಲವ್ ಮಾಕ್ಟೇಲ್ ಜೋಡಿಯೂ ಸದ್ಯದರಲ್ಲೇ ನಾವು ಮದ್ವೆಯಾಗ್ತೀವಿ ಅನ್ನೋ ಸುದ್ದಿ ರಿವೀಲ್ ಮಾಡಿದೆ.

ಕೊರೊನಾ- ಲಾಕ್‌ಡೌನ್ ಇಲ್ಲದಿದ್ದರೆ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದುವೆ ಡೇಟ್ ಫಿಕ್ಸ್ ಆಗಿರುತ್ತಿತ್ತು. ಆದ್ರೀಗ ಲವ್ ಮಾಕ್ಟೇಲ್ ಸಿಕ್ವೇಲ್ ಬರುವ ವೇಳೆಗೆ ನಾವು ಮದುವೆಯಾಗುತ್ತೇವೆ ಎಂದು ಈ ಜೋಡಿ ತಿಳಿಸಿದೆ.
ಬಂಧು ಬಳಗ- ಗೆಳೆಯರನ್ನೆಲ್ಲ ಕರೆಯುವುದಿದ್ದರೂ ಸುಮಾರು 200ಕ್ಕಿಂತ ಹೆಚ್ಚು ಇರುವ ಕಾರಣ, ಲಾಕ್‌ಡೌನ್ ಮುಗಿದು, ಕೊರೊನಾ ಕಾಟ ಕಡಿಮೆಯಾದ ಮೇಲೆ ಮದುವೆಯಾಗಲು ಕೃಷ್ಣ- ಮಿಲನಾ ನಿರ್ಧರಿಸಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾ ಬಂದಮೇಲೆಯೇ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪ್ರೇಮಪಕ್ಷಿಗಳೆಂದು ಹಲವರಿಗೆ ಗೊತ್ತಾಗಿದ್ದು. ಈ ಚಿತ್ರದ ಮೂಲಕವೇ ಕೃಷ್ಣ ಉತ್ತಮ ನಿರ್ದೇಶಕರೆನ್ನಿಸಿಕೊಂಡಿದ್ದಲ್ಲದೇ, ಮಿಲನಾ ಗುಡ್ ಆ್ಯಕ್ಟ್ರೆಸ್ ಎನ್ನಿಸಿಕೊಂಡರು.
ಲಾಕ್‌ಡೌನ್ ಟೈಮಲ್ಲಿ ಲವ್ ಮಾಕ್ಟೇಲ್ ಸಿಕ್ವೇಲ್ ಚಿತ್ರದ ಚಿತ್ರಕಥೆ ಬರೆದಿದ್ದು, ಶೂಟಿಂಗ್‌ಗಾಗಿ ಅನುಮತಿ ಸಿಕ್ಕಮೇಲೆ ಲವ್ ಮಾಕ್ಟೇಲ್ 2 ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದೆ. ಇದಾದ ಮೇಲೆ ಮಿಲನಾ- ಕೃಷ್ಣ ಮದುವೆ ಎನ್ನಲಾಗಿದೆ.