ನಿಂಬೆಹಣ್ಣು.. ದೇಹವನ್ನ ತಂಪಾಗಿರಿಸುವಲ್ಲಿ ಸಹಕಾರಿಯಾದ ಹಣ್ಣು. ನಿಂಬೆ ಹಣ್ಣಿನಿಂದ ಜ್ಯೂಸ್, ಉಪ್ಪಿನ ಕಾಯಿ, ಲೆಮನ್ ಕೇಕ್, ಕ್ಯಾಂಡೀಸ್, ಐಸ್‌ಕ್ರೀಮ್, ಇತ್ಯಾದಿ ಇತ್ಯಾದಿ ಪದಾರ್ಥವನ್ನ ಮಾಡಲಾಗತ್ತೆ.
ಇಷ್ಟೇ ಅಲ್ಲದೇ, ನಮ್ಮ ಸೌಂದರ್ಯ ಕಾಪಾಡುವಲ್ಲಿ ನಿಂಬೆಹಣ್ಣು ಸಹಕಾರಿಯಾಗಿದೆ. ಗುಳ್ಳೆಗಳನ್ನ ಗುಣಪಡಿಸುವಲ್ಲಿ, ಮುಖವನ್ನ ಶುಭ್ರಗೊಳಿಸೋಕ್ಕೆ, ಮುಖದ ಕಾಂತಿ ಹೆಚ್ಚಿಸುವುದಕ್ಕೆ ನಿಂಬೆಹಣ್ಣು ಸಹಕಾರಿಯಾಗಿದೆ.
ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್, ಒಳ್ಳೆಯ ಕೊಲೆಸ್ಟ್ರಾಲ್ ಎಂದು ಎರಡು ಭಾಗಗಳಿರುತ್ತದೆ. ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲನ್ನ ಹೊರಹಾಕುವಲ್ಲಿ ನಿಂಬೆಹಣ್ಣು ಸಹಕಾರಿಯಾಗಿದೆ.
ದೇಹದ ಕೊಬ್ಬು ಕರಗಿಸುವಲ್ಲೂ ನಿಂಬೆಹಣ್ಣು ಸಹಕಾರಿಯಾಗಿದೆ. ಬೆಳಿಗ್ಗೆ ಉಗುರು ಬೆಚ್ಚು ನೀರಿನಲ್ಲಿ ಒಂದು ಸ್ಪೂನ್ ಜೇನುತುಪ್ಪ ಮತ್ತು ಒಂದು ಸ್ಪೂನ್ ನಿಂಬೆರಸ ಬೆರೆಸಿ ಕುಡಿದರೆ, ಕ್ರಮೇಣ ನಿಮ್ಮ ದೇಹದ ಬೊಜ್ಜು ಕರಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ನಿಂಬೆಹಣ್ಣು ಸಹಕಾರಿಯಾಗಿದೆ.
ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿಂಬೆರಸ ಹಚ್ಚಿದರೆ, ರಕ್ತಸ್ರಾವ ನಿಲ್ಲುತ್ತದೆ.
ನಿಂಬೆಹಣ್ಣು ಆರೋಗ್ಯಕರ, ಸೌಂದರ್ಯವರ್ಧಕ ಮಾತ್ರವಲ್ಲದೇ, ರುಚಿವರ್ಧಕವೂ ಹೌದು. ಆದ್ದರಿಂದ ಚಾಟ್ಸ್ ಮಾಡುವಾಗ ನಿಂಬೆರಸವನ್ನ ಬಳಸಲಾಗುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ