ವಿಪಕ್ಷಗಳ ವಿರೋಧದ ನಡುವೆಯೇ ದೇಶದಲ್ಲಿ ನಡೆದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಸಂಬಂಧ ಅಧಿವೇಶನದಲ್ಲಿ ಚರ್ಚೆ ನಡೀತು. ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ವಿಚಾರವಾಗಿ ಡಿಎಂಕೆ ಸಂಸದ ಟಿ,ಆರ್ ಬಾಲು ಮಾತನಾಡಿದ್ರು.
ದೇಶದಲ್ಲಿ ಗ್ರಾಮೀಣ ಭಾಗದ 12 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಪಠ್ಯಕ್ರಮದ ಅಡಿಯಲ್ಲಿ ಈ ಎಲ್ಲ ವಿದ್ಯಾರ್ಥಿಗಳು 12ನೇ ತರಗತಿ ಪಾಸ್ ಆಗಿದ್ದಾರೆ. ಆದರೆ ನೀಟ್ ಪರೀಕ್ಷೆ ಸಿಬಿಎಸ್ಇ ಪಠ್ಯಕ್ರಮದಲ್ಲಿ ಇರುತ್ತೆ.ಸಿಬಿಎಸ್ಇ ಸಿಲಾಬಸ್ ಬಗ್ಗೆ ಮಾಹಿತಿಯೇ ಇಲ್ಲದ ಮಕ್ಕಳು ಪರೀಕ್ಷೆ ಹೇಗೆ ಎದುರಿಸ್ತಾರೆ ಅಂತಾ ಪ್ರಶ್ನೆ ಮಾಡಿದ್ರು.