Saturday, March 15, 2025

Latest Posts

ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದೇನು..?

- Advertisement -

ಇಂದು ಸಂಜೆ ಆರು ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಕೊರೊನಾ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಲಾಕ್‌ಡೌನ್ ಮುಗಿದಿದೆ, ಆದ್ರೆ ಕೊರೊನಾ ಹೋಗಿಲ್ಲ. ಸಾವಿನ ಸಂಖ್ಯೆ 10 ಕೋಟಿ ಗಡಿಗೆ ಬಂದು ಮುಟ್ಟಿದೆ. ಈ ಬಗ್ಗೆ ನಿರ್ಲಕ್ಷಿಸಬೇಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಮಾಸ್ಕ್ ಹಾಕದೇ ಇದ್ದರೆ ಇದರಿಂದ ನಿಮಗಷ್ಟೇ ಅಲ್ಲ ನಿಮ್ಮ ಮನೆಜನರಿಗೂ ತೊಂದರೆಯಾಗುತ್ತದೆ. ವಿದೇಶಗಳಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗುತ್ತಿತ್ತು, ಆದ್ರೆ ನಿರ್ಲಕ್ಷ್ಯ ತೋರಿದ ಕಾರಣ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಮಹಾಮಾರಿಯ ಔಷಧಿ ಬರುವತನಕ ನಾವು ಕೊರೊನಾ ವಿರುದ್ಧ ಹೋರಾಡಬೇಕು. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ಎಷ್ಟೋ ವರ್ಷಗಳ ಬಳಿಕ ಮಾನವನ ರಕ್ಷಣೆಗಾಗಿ ಯುದ್ಧದ ರೀತಿಯಲ್ಲಿ ಇಡೀ ಪ್ರಪಂಚ ಹೋರಾಡುತ್ತಿದೆ. ಕೊರೊನಾ ವ್ಯಾಕ್ಸಿನ್ ಬಂದ ಮೇಲೆ ಅದನ್ನ ಪ್ರತಿಯೊಬ್ಬರಿಗೂ ತಲುಪಿಸಲು ಸರ್ಕಾರ ಪ್ರಯತ್ನ ಪಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ನಾವು ಮಾಡುವ ಸಣ್ಣ ನಿರ್ಲಕ್ಷ ನಮ್ಮ ಪಯಣವನ್ನ ನಿಲ್ಲಿಸಿ ಬಿಡುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಹಾಕಿಕೊಳ್ಳುವುದು, ಸಾಬೂನಿನಿಂದ ಕೈ ತೊಳೆದುಕೊಳ್ಳುವುದರಿಂದ ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಬಹುದು. ಈ ಕಾರಣಕ್ಕಾಗಿ ಮಾಧ್ಯಮದ ಮೂಲಕ ಪ್ರಜೆಗಳಿಗೆ ಕೇಳಿಕೊಳ್ಳುವುದರೆಂದರೆ, ಈ ಬಗ್ಗೆ ಜನ ಅಭಿಯಾನ ಮಾಡಬೇಕು. ದೇಶದ ಜನರು ನಮಗೆ ಸಾಥ್ ನೀಡಬೇಕು ಎಂದು ವಿನಂತಿಸುವೆ ಎಂದು ಪ್ರಧಾನಿ ಹೇಳಿದ್ದಾರೆ.

ಹೀಗೆ ಎಲ್ಲರಿಗೂ ಎಚ್ಚರಿಕೆಯ ಸಂದೇಶ ನೀಡಿದ ಪ್ರಧಾನಿ ಮೋದಿ, ನವರಾತ್ರಿ, ದೀಪಾವಳಿ, ಈದ್, ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.

- Advertisement -

Latest Posts

Don't Miss