Sunday, September 8, 2024

Latest Posts

ಐಟಂ ಡಾನ್ಸ್‌ಗೆ ಹೆಜ್ಜೆ ಹಾಕಿದ ಸಮಂತಾ, ಎರಡು ಗಂಟೆಯಲ್ಲೇ ಮಿಲಿಯನ್ ವೀವ್ಸ್..!

- Advertisement -

ಇವತ್ತು ಗಂಟೆಗೆ ಪುಷ್ಪಾ ಸಿನಿಮಾದ ಐಟಂ ಸಾಂಗ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ವೀಡಿಯೋ ಅಪ್ಲೋಡ್ ಆದ 2 ಗಂಟೆಯಲ್ಲೇ ಮಿಲಿಯನ್ ವೀವ್ಸ್ ದಾಟಿದೆ. ಊ ಅಂಟಾವಾ, ಊಊ ಅಂಟಾವಾ ಅನ್ನೋ ಸಾಂಗ್‌ಗೆ ಸಮಂತಾ ಸ್ಟೆಪ್ ಹಾಕಿದ್ದು, ಲಿರಿಕಲ್ ವೀಡಿಯೋ ರಿಲೀಸ್ ಆಗಿದೆ.

ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪುಷ್ಪಾ ಸಿನಿಮಾ ಕನ್ನಡದಲ್ಲೂ ಡಬ್ ಆಗಿದೆ. ಈಗಾಗಲೇ ಈ ಸಿನಿಮಾದ ಶ್ರೀವಲ್ಲಿ ಹಾಡು ಸಖತ್ ಫೇಮಸ್ ಆಗಿದ್ದು, ಇದೀಗ ಊ ಅಂಟಾವಾ, ಊಊ ಅಂಟಾವಾ ಅನ್ನೋ ಸಾಂಗ್ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಈ ಲಿರಿಕಲ್ ವೀಡಿಯೋ ನೋಡ್ತಿದ್ರೆ ಸಮಂತಾ ಡಾನ್ಸ್ ಸಖತ್ ಆಗಿರುವ ಎಲ್ಲಾ ಲಕ್ಷಣ ಕಾಣ್ತಿದೆ.

ಇನ್ನು ಈ ಹಾಡನ್ನ ಇಂದ್ರಾವತಿ ಚೌಹಾಣ್ ಹಾಡಿದ್ದು, ದೇವಿ ಶ್ರೀ ಪ್ರಸಾದ್ ಕಂಪೋಸ್ ಮಾಡಿದ್ದಾರೆ. ಚಂದ್ರಬೋಸ್ ಲಿರಿಕ್ಸ್ ಬರೆದಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಖಡಕ್ ಪಾತ್ರದಲ್ಲಿ ಮಿಂಚಲಿದ್ದಾರೆ. ಇದೇ ಡಿಸೆಂಬರ್ 17ರಂದು ಪುಷ್ಪಾ ಮೂವಿ ತೆರೆಗಪ್ಪಳಿಸಲಿದೆ.

- Advertisement -

Latest Posts

Don't Miss