ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

ಯಲಹಂಕದ ಬಿಬಿಎಂಪಿ ವಾರ್ಡ್ ನಂಬರ್ 2ರ ಕೊಂಡಪ್ಪ ಬಡಾವಣೆಯಲ್ಲಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಚಾಲನೆ ನೀಡಿದರು.

Karnataka TV Contact

ಇದೇ ವೇಳೆ ವಾರ್ಡ್ ನಂಬರ್ 2 ಕೊಂಡಪ್ಪ ಬಡಾವಣೆಯ ಬಿಬಿಎಂಪಿ ಸದಸ್ಯೆ ಅಮರನಾಥ್ ಪದ್ಮಾವತಿ ಅವರ ಐದು ವರ್ಷಗಳ ಅಧಿಕಾರವಧಿ ಸೆಪ್ಟಂಬರ್ 10ಕ್ಕೆ ಮುಗಿಯಲಿದೆ. ಹೀಗಾಗಿ ವಾರ್ಡ್ ಅಭಿವೃದ್ಧಿಗೆ ಶ್ರಮಿಸಿದ ಸ್ಥಳೀಯ ಶಾಸಕ ಎಸ್.ಆರ್ ವಿಶ್ವನಾಥ್ ಅವರಿಗೆ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

ಅಲ್ಲದೇ ಕೊಂಡಪ್ಪ ಬಡಾವಣೆಯನ್ನು ಸ್ವಚ್ಛವಾಗಿಟ್ಟು, ಕೊರೊನಾ ವಾರಿಯರ್ಸ್ ಗಳ ರೀತಿ ಕಾರ್ಯನಿರ್ವಹಿಸಿದ ಸುಮಾರು 75ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.

ಶಾಸಕರಾದ ಎಸ್.ಆರ್.ವಿಶ್ವನಾಥ್ ಮಾತನಾಡಿ, ಬಿಬಿಎಂಪಿ ಸದಸ್ಯರ ಅಧಿಕಾರವಧಿ ಸೆಪ್ಟಂಬರ್ 10ಕ್ಕೆ ಮುಕ್ತಾಯವಾಗಲಿದೆ. ಅಧಿಕಾರವಿರಲಿ, ಇಲ್ಲದೇ ಇರಲಿ ಜನಪ್ರತಿನಿಧಿಗಳು ಸದಾ ಸಾರ್ವಜನಿಕರ ಸೇವೆಗೆ ಬದ್ಧರಾಗಿರಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1800 ಮನೆಗಳನ್ನು ಇಲ್ಲಿನ ಬಡವರಿಗೆ ನಿರ್ಮಿಸಿಕೊಡಲು ಸಿದ್ಧತೆ ನಡೆಸಲಾಗಿದೆ. ಅದೇ ರೀತಿ 94 ಸಿಸಿ ಅರ್ಜಿಗಳನ್ನು ಹಾಕಿರುವ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಮಂಜೂರಾತಿ ಪತ್ರ ನೀಡಲಾಗುವುದು ಎಂದರು.

ನಾಗೇಂದ್ರ ಆರೂಡಿ, ಕರ್ನಾಟಕ ಟಿವಿ ಬೆಂಗಳೂರು

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ
ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ
ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

About The Author