Wednesday, December 4, 2024

Latest Posts

ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿ..!

- Advertisement -

ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಲು ರೆಡಿಯಾಗಿತ್ತು. ರಾಮನವಮಿ, ಯುಗಾದಿ ಹಬ್ಬಕ್ಕೆ ಸಿನಿಮಾಗಳು ರಿಲೀಸ್ ಆಗಬೇಕೆಂದು ಸಿದ್ಧವಾಗಿತ್ತು. ಆದ್ರೆ ಕೊರೊನಾ ಮಹಾಮಾರಿಯಿಂದ ಎಲ್ಲ ಸಿದ್ದತೆಗೆ ಬ್ರೇಕ್ ಹಾಕಲಾಯಿತು. ದೇಶವೇ ಲಾಕ್‌ಡೌನ್ ಆಗಿ ಶೂಟಿಂಗ್, ಥಿಯೇಟರ್ ಎಲ್ಲವೂ ಸ್ಥಗಿತಗೊಂಡಿತು.

ಆದ್ರೆ ಇದೀಗ ಲಾಕ್‌ಡೌನ್ ಕೊಂಚ ಸಡಿಲಿಕೆ ಮಾಡಿದ್ದು, ಶೂಟಿಂಗ್ ಸಿನಿಮಾ ರಿಲೀಸ್‌ಗೆ ತಯಾರಿ ನಡೆದಿದೆ. ಅಲ್ಲದೇ, ಈಗಾಗಲೇ ಮಾಲ್‌ಗಳು ಓಪೆನ್ ಆಗಿದ್ದು, ಕೆಲ ತಿಂಗಳಲ್ಲೇ ಥಿಯೇಟರ್‌ಗಳು ಕೂಡ ತೆರೆಯಲಿದ್ದು, ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ರಿಲೀಸ್ ಆಗಲು ರೆಡಿಯಾಗಿವೆ.

ರಾಕಿ ಭಾಯ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ದುನಿಯಾ ವಿಜಿ, ಧ್ರುವ ಸರ್ಜಾ ನಟನೆಯ ಚಿತ್ರಗಳು ಈ ವರ್ಷ ರಿಲೀಸ್ ಆಗಲು ರೆಡಿಯಾಗಿದೆ. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ವಿಷಯದಲ್ಲಿ ಕ್ಲ್ಯಾಶ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಸಲಗ, ಕೋಟಿಗೊಬ್ಬ-3, ರಾಬರ್ಟ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಬರುವುದಷ್ಟೇ ಬಾಕಿಯಿದೆ. ಕೆಜಿಎಫ್-3, ಪೊಗರು, ಯುವರತ್ನ ಚಿತ್ರದ ಕೆಲ ಕೆಲಸಗಳು ಬಾಕಿ ಇದೆ.

ಹೀಗಾಗಿ ಮೊದಲಿಗೆ ರಾಬರ್ಟ್ ಮತ್ತು ಸಲಗ ಸಿನಿಮಾಗಳು ರಿಲೀಸ್ ಆಗಬಹುದು. ನಂತರ ಒಂದೊಂದಾಗಿ ಉಳಿದ ಸಿನಿಮಾಗಳು ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

https://youtu.be/g_SnmF7liKY
- Advertisement -

Latest Posts

Don't Miss