ಡ್ರಗ್ ಮಾಫಿಯಾ ಜಾಲಕ್ಕೆ ಸ್ಯಾಂಡಲ್ವುಡ್ ನಂಟು ಪ್ರಕರಣ ಅನೇಕ ಸ್ಟಾರ್ ನಟಿಯರ ನಿದ್ದೆಗೆಡಿಸಿದೆ, ಈಗಾಗಲೇ ಸ್ಯಾಂಡಲ್ವುಡ್ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಟಿ ಸಂಜನಾ ಗಲ್ರಾನಿಗೆ ಢವ ಢವ ಶುರುವಾಗಿದೆ.
ನಟಿ ರಾಗಿಣಿ ಆಪ್ತ ರವಿ ನೀಡಿರುವ ಮಾಹಿತಿ ಹಾಗೂ ಸಾಕ್ಷ್ಯನಾಶ ಆರೋಪ ಹಿನ್ನೆಲೆ ರಾಗಿಣಿ ಯನ್ನ ಸಿಸಿಬಿ ವಶಕ್ಕೆ ಪಡೆದಿದೆ. ಇತ್ತ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಕೂಡ ಸಿಸಿಬಿ ವಶದಲ್ಲಿದ್ದು ಸಂಜನಾಗೂ ಸಿಸಿಬಿ ವಶಕ್ಕೆ ಪಡೆಯೋ ಭಯ ಶುರುವಾಗಿದೆ.
ಇನ್ನು ಬೆಂಗಳೂರಿನಲ್ಲಿ ರಾಹುಲ್ ವಿಚಾರವಾಗಿ ಮಾತನಾಡಿದ ನಟಿ ಸಂಜನಾ, ರಾಹುಲ್ ನನ್ನ ಅಣ್ಣನಿದ್ದಂತೆ . ಆತನನ್ನ ನಾನು ರಾಕಿಭಾಯ್ ಅಂತಾನೇ ಕರೆಯುತ್ತಿದ್ದೆ . ನನ್ನ ಅಣ್ಣ ರಾಹುಲ್ ತುಂಬಾ ಅಮಾಯಕ. ಅವನು ವಿಚಾರಣೆ ಮುಗಿಸಿ ಆದಷ್ಟು ಬೇಗ ಹೊರಬರ್ತಾನೆ ಎಂಬ ನಂಬಿಕೆ ಇದೆ ಅಂತಾ ಹೇಳಿದ್ರು.
ಇನ್ನು ಇದೇ ವೇಳೆ ಪ್ರಶಾಂತ್ ಸಂಬರಗಿ ವಿರುದ್ಧವೂ ಹರಿಹಾಯ್ದ ಸಂಜನಾ ಆತ ಯಾರೂ ಅನ್ನೋದು ನನಗೆ ಗೊತ್ತಿಲ್ಲ. ಡ್ರಗ್ ಮಾಫಿಯಾ ಬಗ್ಗೆ ಹೇಳಿಕೆ ಕೊಡಲು ಶುರು ಮಾಡಿದ ನಂತರವೇ ನಾನು ಸಂಬರಗಿ ಹೆಸರನ್ನ ಕೇಳಲ್ಪಟ್ಟೆ ಅಂತಾ ಹೇಳಿದ್ರು.