- Advertisement -
ಮಾಜಿ ಸಿಎಂ ಹೆಚ್ಡಿಕೆಯನ್ನ ಊಸರವಳ್ಳಿಗೆ ಹೋಲಿಸಿರೋ ಸಚಿವ ಬಿ.ಸಿ ಪಾಟೀಲ್ ನಿಜವಾದ ಊಸರವಳ್ಳಿ ಅಂತಾ ಮಾಜಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ,

ರಾಜ್ಯದಲ್ಲಿ ಡ್ರಗ್ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಈ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಮಂತ್ರಿಯಾದಾಗ ಇಂತಹ ದಂಧೆಗಳಿಗೆ ಬಿಸಿ ಮುಟ್ಟಿಸಿದ್ದರಿಂದಲೇ ಕೆಲವರು ದೇಶಾಂತರ ಹೋಗಿ ಬಳಿಕ ಜಾಮೀನು ಪಡೆದು ಬಂದಿದ್ದಾರೆ ಅಂತಾ ಗುಡುಗಿದ್ರು.
ಅಲ್ಲದೇ ಮೊದಲು ಖಾಕಿ ತೊಟ್ಟಿದ್ದ ಬಿ.ಸಿ ಪಾಟೀಲ್ಗೇ ಡ್ರಗ್ ದಂಧೆ ಗೊತ್ತಿಲ್ಲ ಅಂದರೆ ನಗೆಪಾಟಲಿನ ಸಂಗತಿ. ಅಧಿಕಾರದ ಆಸೆಗಾಗಿ ಪಕ್ಷ ಬದಲಿಸೋ ಬುದ್ಧಿ ಬಿ.ಸಿ ಪಾಟೀಲ್ಗೆ ಕರಗತವಾಗಿದೆ. ದಿನಕ್ಕೊಂದು ನಾಲಗೆ ಬಣ್ಣ ಬದಲಾಯಿಸೋ ಇಂತಹ ಊಸರವಳ್ಳಿಗಳು ಹೆಚ್ಡಿಕೆ ಬಗ್ಗೆ ಮಾತನಾಡೋ ಅವಶ್ಯಕತೆ ಇಲ್ಲ ಅಂತಾ ಕಿಡಿಕಾರಿದ್ರು.

- Advertisement -