Friday, July 11, 2025

Latest Posts

Karnataka : ರಾಜ್ಯಕ್ಕೆ ಖುಷಿ ಸುದ್ದಿ ಕೊಟ್ಟವಳು ನಾಪತ್ತೆ!; ನಿರೂಪಕಿ ದಿವ್ಯಾ ವಸಂತಾ ಸುಲಿಗೆ ಕಹಾನಿ

- Advertisement -

ದಿವ್ಯಾ ವಸಂತಾ ಯಾರಿಗೆ ಗೊತ್ತಿಲ್ಲ ಹೇಳಿ.. ಇದು ರಾಜ್ಯವೇ ಖುಷಿ ಪಡುವ ಸುದ್ದಿ ಅಂತಾ ಹೇಳ್ಕೋಂಡ್ ತಾನೊಬ್ಬ ನಿರೂಪಕಿ ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿ, ನೆಗೆಟಿವ್​ ಟ್ರೋಲ್​ಗಳನ್ನೇ ತನ್ನ ಮಹಾನ್ ಸಾಧನೆ ಅನ್ನೋ ರೀತಿಯ ಮೆರೆಯುತ್ತಿದ್ದ ರೀಲ್ಸ್ ರಾಣಿ ದಿವ್ಯಾ ವಸಂತಾ.. ಇದೀಗ ಈಕೆಯ ಅಸಲಿ ಮುಖ ಅನಾವರಣಗೊಂಡಿದೆ. ಟ್ರೋಲ್‍ನಿಂದಲೆ ಸಾಕಷ್ಟು ಹೆಸರುವಾಸಿಯಾದವಳು. ಕನ್ನಡದ ಖಾಸಗಿ ಸುದ್ದಿ ವಾಹಿನಿಯ ನಿರೂಪಕಿ, ‘ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ’ ಕೊಟ್ಟ ದಿವ್ಯಾ ವಸಂತ ಈಗ ಸುಲಿಗೆ ಪ್ರಕರಣದಲ್ಲಿ ತಗಲಾಕ್ಕೊಂಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯಾ, ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಳು. ಅಲ್ಲದೆ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ರೀಲ್ಸ್‌ಗಳ ಮೂಲಕ ಆಕೆ ಖ್ಯಾತಿ ಪಡೆದಿದ್ದಳು. ಖಾಸಗಿ ಸುದ್ದಿವಾಹಿನಿಯಲ್ಲಿ ಆಕೆಗೆ 15 ಸಾವಿರ ರು. ಸಂಬಳ ಇದ್ದರೆ, ಮನರಂಜನಾ ವಾಹಿನಿ ಯಲ್ಲಿ ಹಾಸ್ಯ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದ ಆಕೆಗೆ ವಾರಕ್ಕೆ 6 ರಿಂದ 7 ಸಾವಿರ ರು. ಸಂಭಾ ವನೆ ಸಿಗುತ್ತಿತ್ತು. ಐಷಾರಾಮಿ ಜೀವನಕ್ಕೆ ಬಿದ್ದಿದ್ದ ದಿವ್ಯಾ, ಸುಲಭವಾಗಿ ಹಣ ಸಂಪಾದಿಸಲು ಅಡ್ಡ ಮಾರ್ಗ ತುಳಿದು ಸಂಕಷ್ಟಕ್ಕೆ ತುತ್ತಾಗಿದ್ದಾಳೆ.

 

ಬೆಂಗಳೂರಿನ ಇಂದಿರಾನಗರದಲ್ಲಿರುವ ಮಸಾಜ್ ಪಾರ್ಲರ್ & ಸ್ಪಾದ ವ್ಯವಸ್ಥಾಪಕನಿಗೆ ಬೆದರಿಗೆ 15 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ನಿರೂಪಕಿ ಹಾಗೂ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗಿಯಾಗಿದ್ದ ದಿವ್ಯ ವಸಂತ ಕೂಡ ಆರೋಪಿಯಾಗಿದ್ದಾರೆ. ಆಕೆಯ ಸಹೋದರ ಸಂದೇಶ್ ಈಗಾಗಲೇ ಬಂಧಿತನಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ನ್ಯೂಸ್ ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜಾನುಕುಂಟೆ ವೆಂಕಟೇಶ್‍ನನ್ನು ಜೆಬಿ ನಗರ ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆ ದಿವ್ಯಾ ಹಾಗೂ ರಾಜಾನುಕುಂಟೆ ವೆಂಕಟೇಶ್ ಆಪ್ತವಾಗಿರುವ ಕೆಲವೊಂದು ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್ ಗ್ರೂಪ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ರು ಎಂದು ವರದಿಯಾಗಿದೆ. ತಮ್ಮ ಡೀಲ್, ಪ್ಲ್ಯಾನ್‍ಗಳ ಬಗ್ಗೆ ಇದೇ ಗ್ರೂಪ್‍ನಲ್ಲಿ ಆರೋಪಿಗಳು ಚರ್ಚಿಸುತ್ತಿದ್ದರು ಎನ್ನಲಾಗಿದೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಾ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಳು. ರ್ಯಾಪ್ ಸಾಂಗ್ಸ್ ಮಾಡಿ ಗಮನ ಸೆಳೆಯುವಪ್ರಯತ್ನ ಮಾಡುತ್ತಿದ್ದಳು.

ತನ್ನ ಯೂಟ್ಯೂಬ್ ಚಾನಲ್‍ಗೆ ನಿರೂಪಕಿಯಾಗಿ ದಿವ್ಯಾಳನ್ನು ವೆಂಕಟೇಶ್ ಪರಿಚಯಿಸಿಕೊಂಡಿದ್ದ. ಅದೇ ಸಲುಗೆಯಿಂದ ಇಬ್ಬರು ಅಮಾಯಕ ಸುಲಿಗೆ ಮಾಡಲು ಆರಂಭಿಸಿದ್ದರು. ಇನ್ನು ಶ್ರೀಮಂತರು, ಮಸಾಜ್ ಪಾರ್ಲರ್​ಗಳು ಹಾಗೂ ವೈದ್ಯರೇ ಈ ಗ್ಯಾಂಗ್‍ನ ಟಾರ್ಗೆಟ್ ಆಗಿದ್ದರು. ಹನಿಟ್ರ್ಯಾಪ್ ರೀತಿ ಹಣವುಳ್ಳವರನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. 100ಕ್ಕೂ ಹೆಚ್ಚು ಜನರನ್ನು ವೆಂಕಟೇಶ್ ಹಾಗೂ ದಿವ್ಯಾ ತಂಡ ಸುಲಿಗೆ ಮಾಡಿರುವ ಬಗ್ಗೆ ಪೆÇಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಆನ್‍ಲೈನ್‍ನಲ್ಲಿ ಇವರಿಬ್ಬರ ಖಾತೆಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಹಣ ವರ್ಗಾವಣೆಯಾಗಿದೆ.
ಇನ್ನು ದಿವ್ಯ ವಸಂತ ಬೆಳೆದಿದ್ದೇ ಟ್ರೋಲ್​ಗಳಿಂದ. ‘ಇದು ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ..’ ಎನ್ನುವ ಲೈನ್ ಮೂಲಕವೇ ಎಂಟರ್‍ಟೇನ್‍ಮೆಂಟ್ ಜಗತ್ತಿಗೆ ಕಾಲಿಟ್ಟಾಕೆ ದಿವ್ಯ ವಸಂತ.

ಈ ಸುಲಿಗೆ ಯತ್ನ ಪ್ರಕರಣದಲ್ಲಿ ತಮ್ಮ ಮಕ್ಕಳು ಸಿಕ್ಕಿಬಿದ್ದರಿಂದ ತೀವ್ರವಾಗಿ ನೊಂದಿರುವ ದಿವ್ಯಾ ತಾಯಿ, ಜಿ.ಬಿ.ನಗರ ಠಾಣೆಗೆ ತೆರಳಿ ಕಣ್ಣೀರಿಟ್ಟಿದ್ದಾರೆ. ತಾನು ಮನೆಗಳಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದ್ದೇನೆ. ವೆಂಕಟೇಶ್‌ನಿಂದಲೇ ದಿವ್ಯಾ ತಪ್ಪು ದಾರಿ ತುಳಿದಿದ್ದಾಳೆ ಎಂದು ಅವರು ಅಲವತ್ತುಕೊಂಡಿದ್ದಾಗಿ ತಿಳಿದು ಬಂದಿದೆ.

- Advertisement -

Latest Posts

Don't Miss