Wednesday, August 20, 2025

Latest Posts

ಯ್ಯೂಟೂಬರ್‌ಗೆ ದುಡ್ಡು ಎಲ್ಲಿಂದ ಬಂತು NIA ತನಿಖೆ ಆಗಬೇಕು; ಆರ್ ಅಶೋಕ್

- Advertisement -

Political News: ಹುಬ್ಬಳ್ಳಿ: ಧರ್ಮಸ್ಥಳ ವಿಚಾರದಲ್ಲಿ ನಾವು ರಾಜಕಾರಣ ಮಾಡಿಲ್ಲಾ.‌ ಈ ಪ್ರಕರಣದಲ್ಲಿ ರಾಜಕಾರಣ ಮಾಡಿದ್ದು ಕಾಂಗ್ರೆಸ್, ಇದರ ಹಿಂದೆ ದೊಡ್ಡ ಖತರ್ನಾಕ ಗ್ಯಾಂಗ ಇದೆ.‌ ದಂಡುಪಾಳ್ಯ ರೀತಿ ನಗರ ನಕ್ಸಲರ ಗ್ಯಾಂಗ ಇದರ ಹಿಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.

ಹುಬ್ಬಳ್ಳಿ ವರೂರ ಗ್ರಾಮದಲ್ಲಿ ಮಾತನಾಡಿದ ಅವರು, ಮುಸುಕುದಾರಿ ಅವನು ಕೂಡ ಮತಾಂದರ ತರಾ ಕಾಣುತ್ತಾನೆ. ಅವನಿಗೆ ಯಾರೋ ದುಡ್ಡು ಕೊಟ್ಟಿದ್ದಾರೆ. ಅದಕ್ಕೆ ಈ ರೀತಿ ಹೇಳ್ತಿದ್ದಾರೆ. ಯ್ಯೂಟೂಬ್ ಚಾನಲ್ ಮಾಡಲು ಎಲ್ಲಿಂದ ದುಡ್ಡು ಬಂದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.‌

ಹಿಂದೂ ಧರ್ಮ ಬಿಜೆಪಿ ಸ್ವತ್ತಲ್ಲಾ ಅನ್ನೋ ಡಿ.ಕೆ ಹೇಳಿಕೆ ವಿಚಾರ, ಪಸ್ಟ್ ನಿಮ್ಮ ಸ್ವತ್ತಾ ಅಂತ ಡಿ.ಕೆ ಹೇಳಲಿ. ಮಸೀದಿ ಬಗ್ಗೆ ಈ ರೀತಿ ಆರೋಪ ಬಂದಿದ್ರೆ ನೀವು ತನಿಖೆಗೆ ಕೊಡ್ತಿದ್ದೀರಾ ಎದೆ ಮುಟ್ಟಿಕೊಂಡು ಹೇಳಿ ಎಂದು ಸಿದ್ದರಾಮಯ್ಯಗೆ ಆರ್ ಅಶೋಕ್ ಹೇಳಿದರು.

- Advertisement -

Latest Posts

Don't Miss