ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಕಾರ್ಯಕ್ರಮದಲ್ಲಿ ನೈಟ್ ಕರ್ಫ್ಯೂ ಉಲ್ಲಂಘನೆ

www.karnatakatv.net : ರಾಯಚೂರು : ರಾಯಚೂರಲ್ಲಿ  ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ  ಶಾಸಕರು ಹಾಗೂ ಕಾರ್ಯಕರ್ತರು  ಅದ್ದೂರಿಯಾಗಿ  ಸ್ವಾಗತ ಮಾಡಿದರು. ಜನಾಶೀರ್ವಾದ ಗ್ರಾಮೀಣ ಭಾಗದ  ಶಕ್ತಿನಗರದ ಸೂಗುರೇಶ್ವರ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ನಗರದ ವರೆಗೆ ರೊಡ್ ಶೋ ನಡೆಸಿದರು. ದಾರಿ ಯುದ್ಧಕ್ಕು ಕಾರ್ಯಕರ್ತರು ಪುಷ್ಪ ಮಳೆ ಸುರಿಯುವ ಮೂಲಕ ಅದ್ದೂರಿ ಸ್ವಾಗತಿಸಿದರು .

ಜನಾಶೀರ್ವಾದ ಯಾತ್ರೆಯಲ್ಲಿ ೩ ಜೆಸಿಬಿ ಮೂಲಕ  ಸಚಿವರಿಗೆ  ಹೂವಿನ ಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ದಾರಿಯುದ್ದಕ್ಕೂ ಕಾರ್ಯಕರ್ತರು ಸಚಿವರ ಜೊತೆ ಬೈಕ್  ರ್ಯಾಲಿ ಮಾಡಿದರು . ರಾತ್ರಿ ೯ ಗಂಟೆಗೆ ನೈಟ್ ಕರ್ಫ್ಯೂ ಇದ್ದರೂ ನಗರದ ಪ್ರಮುಖ ಬದಿಗಳಲ್ಲಿ ರೋಡ್ ಶೋ ಸಡೆಸುತ್ತ ಕಾರ್ಯಕರ್ತರು ಮೆರವಣಿಗೆ ನಡೆದರು .

ರಾತ್ರಿ ೧೦ ಗಂಟೆಗೆಯಾದರು ಬಿಜೆಪಿ ಕಾರ್ಯಕ್ರಮ ನಡೆಸಿದರು ಮೆರವಣಿಗೆಯಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ  ಮರೆತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು . ಸಚಿವರಿಗೆ ನಗರ ಶಾಸಕರಾದ ಶಿವರಾಜ್ ಪಾಟೀಲ್ ಹಾಗೂ ಮಾಜಿ ಶಾಸಕರು ಬಿಜೆಪಿ ಮುಖಂಡರು ಸಾಥ್ ನೀಡಿದರು . ಮೂರನೇ ಅಲೆ ಭೀತಿಯ ನಡುವೆ ಅದ್ಧೂರಿ ಸ್ವಾಗತ ಮಾಡಿಕೊಂಡು ಕೋರೊನಾ ರೂಲ್ಸ್ ಬ್ರೇಕ್ ಮಾಡಿದರು . ಕಲ್ಯಾಣ ಮಂಟಪದ ಮಲಿಕರ ಮೇಲೆ ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

About The Author