Monday, September 9, 2024

Latest Posts

Karnataka : ನಿಖಿಲ್​ ಮೈತ್ರಿ ಅಭ್ಯರ್ಥಿ?: ಕಾಂಗ್ರೆಸ್​ನಿಂದ ಸುರೇಶ್ ಸ್ಪರ್ಧೆ?

- Advertisement -

ಹೆಚ್​.ಡಿ.ಕುಮಾರಸ್ವಾಮಿ ಅವರಿಂದ ತೆರವಾಗಿರೋ ಚನ್ನಪಟ್ಟಣ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ಉಪಚುನಾವಣೆ ಘೋಷಣೆಯಾಗಲಿದೆ. ಆದ್ರೆ, ಮೈತ್ರಿ ಅಭ್ಯರ್ಥಿ ಯಾರು? ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ. ಮೈತ್ರಿ ಟಿಕೆಟ್​​ಗಾಗಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೀಶ್ವರ್ ಭಾರಿ ಕಸರತ್ತು ನಡೆಸ್ತಿದ್ದಾರೆ. ಇತ್ತೀಚಿಗೆ ದೆಹಲಿ ತೆರಳಿದ್ದ ಸೈನಿಕ, ಮೈತ್ರಿ ಟಿಕೆಟ್​ಗಾಗಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಮಾಡಿದ್ರು.

ಅಲ್ಲದೇ, ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರ ದೆಹಲಿ ನಿವಾಸದಲ್ಲಿ ಹೈವೋಲ್ಟೇಜ್ ಮೀಟಿಂಗ್ ಕೂಡ ನಡೆದಿತ್ತು. ಇದ್ರಲ್ಲಿ ಹೆಚ್​ಡಿ ಕುಮಾರಸ್ವಾಮಿ, ವಿ.ಸೋಮಣ್ಣ, ಬೊಮ್ಮಾಯಿ, ಸಿ.ಟಿ.ರವಿ, ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ರು. ಈ ವೇಳೆ ಮೈತ್ರಿ ಟಿಕೆಟ್ ಯೋಗೀಶ್ವರ್​ಗೆ ನೀಡಬೇಕೆಂದು ಬಿಜೆಪಿ ನಾಯಕರು, ಹೆಚ್​ಡಿಕೆ ಮನವರಿಕೆ ಮಾಡಿದ್ದರು. ಆದ್ರೆ, ಚುನಾವಣೆ ಘೋಷಣೆ ಆಗಲಿ ನಂತರ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ಮಾಡೋಣ ಅಂತ ಹೆಚ್​ಡಿಕೆ ಹೇಳಿದ್ರು.

ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡೋದಕ್ಕೆ ದಳಪತಿ ಮನಸ್ಸು ಮಾಡ್ತಿಲ್ಲ. ಅಲ್ಲದೇ, ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಕೂಡ ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ಕೊಡುವುದು ಬೇಡ. ನಿಖಿಲ್ ಕುಮಾರಸ್ವಾಮಿಯೇ ಸ್ಪರ್ಧಿಸಲಿ ಎಂಬ ಪಟ್ಟು ಹಿಡಿದಿದ್ದಾರೆ. ಈಗಾಗಲೇ ನಿಖಿಲ್ ಕೂಡ ಚನ್ನಪಟ್ಟಣದಲ್ಲಿ ರೌಂಡ್ಸ್ ಹಾಕ್ತಿದ್ದು, ಜನರ ಭಾವನೆ ಅರಿತುಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿಯೇ, ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​ ಸ್ಪರ್ಧಿಸೋದು ಪಕ್ಕಾ ಎನ್ನಲಾಗ್ತಿದೆ.

ಮೈತ್ರಿ ಅಭ್ಯರ್ಥಿ ನಿಖಿಲ್ ಸ್ಪರ್ಧೆ ಮಾಡಿದ್ರೆ, ಸಿ.ಪಿ.ಯೋಗೀಶ್ವರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದು ಬಹುತೇಕ ಪಕ್ಕಾ ಎನ್ನಲಾಗಿದೆ. ಒಂದು ವೇಳೆ ಯೋಗೀಶ್ವರ್ ಪಕ್ಷೇತ್ರ ಅಭ್ಯರ್ಥಿ ಆದ್ರೆ, ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ನಡೆಯೋದು ಫಿಕ್ಸ್. ಆದ್ರೆ, ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಕುತೂಹಲ ಮೂಡಿಸಿದೆ. ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಹೆಚ್​ಡಿಕೆ ರಾಜೀನಾಮೆ ಕೊಡ್ತಿದ್ದಂತೆ, ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ಸಾಲು ಸಾಲು ಸಭೆಗಳನ್ನು ನಡೆಸ್ತಿದ್ದಾರೆ. ಬಡವರಿಗೆ ಮನೆ ಹಂಚಿಕೆ ಮಾಡಲು ಮುಂದಾಗಿದ್ದಾರೆ.

ಅದ್ರಲ್ಲೂ ಇತ್ತೀಚಿಗೆ ಡಿಕೆಶಿ ಹೇಳಿದ್ದ ಒಂದು ಮಾತು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ನಾನೇ ಕಾಂಗ್ರೆಸ್ ಅಭ್ಯರ್ಥಿ. ನಾನೇ ಎಲ್ಲರಿಗೂ ಬಿ ಫಾರಂ ಕೊಡೋದು, ಅದಕ್ಕೆ ನಾನೇ ಸಹಿ ಹಾಕಬೇಕು ಅಂತ ಹೇಳಿದ್ರು. ಇದ್ರ ಬೆನ್ನಲ್ಲೇ ಡಿಕೆಶಿಯೇ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೀಗ ಪ್ಲ್ಯಾನ್ ಬಿ ಅನ್ನ ಕಾಂಗ್ರೆಸ್ ಸಿದ್ಧಪಡಿಸಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಮಂಜುನಾಥ್ ವಿರುದ್ಧ ಸೋಲುಕಂಡಿದ್ದ ಮಾಜಿ ಸಂಸದ ಡಿಕೆ ಸುರೇಶ್ ಕಣಕ್ಕಿಳಿಸೋದಕ್ಕೆ ಡಿಕೆಶಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ನಿಖಿಲ್ ಸ್ಪರ್ಧಿಸಿದ್ರೆ, ಡಿಕೆ ಸುರೇಶ್ ಕಣಕ್ಕಿಳಿಯಲ್ಲಿದ್ದಾರಂತೆ. ಒಂದು ವೇಳೆ ಮೈತ್ರಿ ಅಭ್ಯರ್ಥಿಯಾಗಿ ಯೋಗೀಶ್ವರ್​ ಕಣಕ್ಕಿಳಿದ್ರೆ, ಡಿಕೆ ಶಿವಕುಮಾರ್ ಚುನಾವಣಾ ಅಖಾಡಕ್ಕೆ ಎಂಟ್ರಿಕೊಡಲಿದ್ದಾರೆ.ಒಟ್ನಲ್ಲಿ ಮೈತ್ರಿ ಟಿಕೆಟ್ ಯಾರಿಗೆ ಎಂಬುದರ ಮೇಲೆ ಕಾಂಗ್ರೆಸ್ ಅಭ್ಯರ್ಥಿ ನಿರ್ಧರವಾಗಲಿದೆ. ಸೋಲಿನ ಮುಖಭಂಗದಿಂದ ತಪ್ಪಿಸಿಕೊಳ್ಳಬೇಕಾದ್ರೆ, ಹೆಚ್​ಡಿಕೆ ಯೋಗೀಶ್ವರ್​ಗೆ ಕ್ಷೇತ್ರಬಿಟ್ಟುಬೇಕಾಗಿದೆ. ಈ ಮೂಲಕ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.

- Advertisement -

Latest Posts

Don't Miss