www.karnatakatv.net : ಭಾರತಕ್ಕೆ ಮತ್ತೆ ನಿಫಾ ಮಹಾಮಾರಿ ಎಂಟ್ರಿಕೊಟ್ಟಿದೆ. ಎರಡು ವರ್ಷದ ಹಿಂದೆ ಕೇರಳಾದ ಕೋಯಿಕೋಡ್ ನಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಈಗ ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. ನಿಫಾ ಲಕ್ಷಣಗಳೊಂದಿಗೆ ದಾಖಲಾಗಿದ್ದ 12 ವರ್ಷದ ಬಾಲಕ ನಿನ್ನೆ ಸಾವನ್ನಪ್ಪಿದ್ದಾನೆ.
ಸೆಪ್ಟಂಬರ್ 01ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್ಟಿಟಿಟ್ಯೂಟ್ ಆಫ್ ವೈರಾಲಜಿಗೆ ಪರೀಕ್ಷೆಗೆಂದು ಕಳುಹಿಸಲಾಗಿತ್ತು. ವರದಿಯಲ್ಲಿ ಆತನಿಗೆ ಪಾಸಿಟಿವ್ ಬಂದಿತ್ತು. ನಿಫಾ ವೈರಸ್ ಹೊಲುವ ಎಲ್ಲಾ ಲಕ್ಷಣಗಳನ್ನು ಆತ ಹೊಂದಿದ್ದ. ಆದರೆ ಇನ್ನೆರಡು ಪರೀಕ್ಷೆಗಳು ಬಾಕಿ ಇದ್ದ ಕಾರಣ ಈ ಬಗ್ಗೆ ಯಾವುದೇ ಘೋಷಣೆಯನ್ನು ಆರೋಗ್ಯ ಇಲಾಖೆ ಮಾಡಿರಲಿಲ್ಲ. ಈ ಮಧ್ಯೆ ಸರ್ಕಾರ ಕೂಡ ಹೆಚ್ಚಿನ ನಿಗಾ ಇಡುವ ಉದ್ದೇಶದಿಂದ ಉನ್ನತ ಮಟ್ಟದ ಸಭೆ ನಡೆಸಿ ಮಾಹಿತಿ ಪಡೆಯುತ್ತಲೇ ಇತ್ತು. ಆದ್ರೆ ಆಸ್ಪತ್ರೆಯಲ್ಲಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಜ್ವರ, ತಲೆನೋವು, ಗಂಟಲು ಕೆರೆತ, ಉಸಿರಾಟದ ತೊಂದರೆ, ವಾಂತಿ ಈ ರೀತಿಯಾದ ಕ್ಷಣಗಳು ಕಂಡುಬರುತ್ತಿದ್ದು, ಇದರ ಜೊತೆಗೆ ಅರೆನಿದ್ರಾವಸ್ಥೆ, ಗೊಂದಲ, ಕೋಮಾ ಸ್ಥಿತಿಗಳಿಗೂ ಹೋಗುವ ಎಲ್ಲಾ ಲಕ್ಷಣಗಳು ಇದರಲ್ಲಿ ಕಂಡುಬರುತ್ತವೆ. ಇದರಿಂದ ಬದುಕುಳಿದವರು ದೀರ್ಘಕಾಲದವರೆಗೆ ಅಡ್ಡ ಪರಿಣಾಮಗಳು ಜತೆಗೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ ಎಂಬುದು ವರದಿಯಾಗಿದೆ.