Belagavi News : ಬೆಳಗಾವಿ ಬರ ಅಧ್ಯನದ ತಂಡ ಭೇಟಿ ನೀಡಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲಕುಪ್ಪಿ ಗ್ರಾಮದಲ್ಲಿ ಡಿಸಿ ನಿತೇಶ ಪಾಟೀಲ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಗೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿದೆ. ಜಿಲ್ಲೆಯ ನೇಸರಗಿ,ಮುರಗೋಡ,ಯರಗಟ್ಟಿ, ಬೈಲಹೊಂಗಲ, ಸವದತ್ತಿ ರಾಮದುರ್ಗ ಬೆಳೆಗಳನ್ನ ತೋರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಸಾಕಷ್ಟು ಬೆಳೆ ಹಾನಿ ಆಗಿದೆ. ಕೇಂದ್ರದ ಅಧಿಕಾರಿಗಳಿಗೂ ಬೆಳೆಹಾನಿಗಳ ಬಗ್ಗೆ ಮನವರಿಕೆ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ 2ಲಕ್ಷ 78ಸಾವಿರ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ.
ಇದನ್ನು ನಾವು ಹೇಳಿದ್ದೇವೆ, ರೈತರು ತಮ್ಮ ಬೆಳೆ ತೋರಿಸುತ್ತಿದ್ದಾರೆ. ಈವರೆಗೆ 2928ಕೋಟಿ ಬೆಳೆಹಾನಿ ಆಗಿದೆ. ಎನ್ ಡಿಆರ್ ಎಫ್ ಪ್ರಕಾರ 332ಕೋಟಿ ಆಗುತ್ತೆ, ಈಗಾಗಲೇ 13ತಾಲೂಕು ಬರಪೀಡಿತ ಪ್ರದೇಶ ಅಂತಾ ಘೋಷಣೆ ಆಗಿದೆ. ಖಾನಾಪೂರ ಮತ್ತು ಬೆಳಗಾವಿ ತಾಲೂಕನ್ನ ಬರಪೀಡಿತ ಪ್ರದೇಶ ಅಂತಾ ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಆಗಿದೆ. ಎಲ್ಲ ಬೆಳೆಗಳು ಹಾನಿಯಾಗಿದೆ,ನೋಡೊದಕ್ಕೆ ಹಸಿರು ಕಾಣಿಸುತ್ತೆ. ಆದ್ರೆ ಎಲ್ಲ ಬೆಳೆಗಳು ಹಾನಿಯಾಗಿವೆ ತಜ್ಞರಿಂದಲೂ ಬರ ತಂಡಕ್ಕೆ ಮನವರಿಕೆ ಮಾಡಲಾಗಿದೆ.