Sunday, May 19, 2024

Latest Posts

ಸಿಐಡಿ ತನಿಖೆ ಬಗ್ಗೆ ನಂಬಿಕೆಯಿಲ್ಲ ಸಿಬಿಐಗೆ ವಹಿಸಿ: ಮಾಳವಿಕಾ ಅವಿನಾಶ್ ಆಗ್ರಹ

- Advertisement -

Hubli News: ಹುಬ್ಬಳ್ಳಿ: ದೇಶವೇ ಬೆಚ್ಚಿ ಬಿಳಿಸುವಂತೆ ಕ್ರೂರವಾಗಿ ನೇಹಾಳ ಕೊಲೆ ಆಗಿದೆ. ಕಾಲೇಜಿನ ಕ್ಯಾಂಪಸ್ ನಲ್ಲೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲಾ. ಪಾಲಕರು ಮಕ್ಕಳನ್ನು ಹೇಗೆ ಕಾಲೇಜಿಗೆ ಕಳುಹಿಸಲು ಧೈರ್ಯ ಮಾಡ್ತಾರೆ. ಈ ನಿಟ್ಟಿನಲ್ಲಿ ಸಿಐಡಿ ತನಿಖೆಯ ಬಗ್ಗೆ ನಂಬಿಕೆಯಿಲ್ಲ. ಈ ಪ್ರಕರಣವನ್ನೂ ಸಿಬಿಐಗೆ ಕೊಡಬೇಕು, ಸಿಬಿಐಗೆ ಕೊಟ್ರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಹೇಳಿದರು.

ನೇಹಾಳ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ವಿಚಾರವನ್ನು ತಳ್ಳಿ ಹಾಕುವ ಕೆಲಸ ಮಾಡ್ತಾ ಇದೆ. ಓಲೈಕೆಗಾಗಿ ರಾಜ್ಯಸರ್ಕಾರ ಈ ರೀತಿ ಮಾಡ್ತಾ ಇದೆ. ಸಿಐಡಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲಾ ಎಂದರು.

ಗುರುವಾರ ನಡೆದ ಘಟನೆಗೆ ಮಂಗಳವಾರ ಸಿಎಂ ಮಾತಾಡ್ತಾರೆ.ಅವರಿಗೆ ಅಷ್ಟು ಪುರುಸೊತ್ತು ಇಲ್ಲಾ. ಎಲ್ಲವನ್ನು ರಾಜಕೀಯವಾಗಿ ಮುಖ್ಯಮಂತ್ರಿಗಳು ನೋಡ್ತಾರೆ. ಸಾಮೂಹಿಕ ಸಮಾಜವಾಗಿ ನಾವೆಲ್ಲರೂ ಕುಟುಂಬದವರಿಗೆ ಧೈರ್ಯ ನೀಡಬೇಕು ಎಂದು ಅವರು ಹೇಳಿದರು.

ಸಿಬಿಐ ತನಿಖೆ ಮಾಡಿದ್ರೆ ಅತ್ಯಂತ ಕಠಿಣ ಶಿಕ್ಷೆ ಸಿಗುತ್ತೆ ಅನ್ನೋದು ನಮ್ಮ ನಂಬಿಕೆ. ಎಲ್ಲವೂ ಸುಧಿರ್ಘವಾಗಿ ತನಿಖೆ ಆಗಬೇಕು ಎಂದ ಮಾಳವಿಕಾ ಅವಿನಾಶ್ ಹೇಳಿದರು.

ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಕೇಂದ್ರ ಸಚಿವ ನಿತೀನ್ ಗಡ್ಕರಿ..

ಕದ್ದುಮುಚ್ಚಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು?: ಸಿಎಂಗೆ ಸುನೀಲ್ ಕುಮಾರ್ ಪ್ರಶ್ನೆ

ಆರೋಪಿ ಫಯಾಜ್ ಮೊಬೈಲ್ನಲ್ಲಿದ್ದ ಫೋಟೋಗಳು ಲೀಕ್ ಆಗಿದ್ದು ಹೇಗೆ?: ಪ್ರಹ್ಲಾದ್ ಜೋಶಿ ಪ್ರಶ್ನೆ..

- Advertisement -

Latest Posts

Don't Miss