Bigg Boss Kannada season 12: ಬಿಗ್‌ಬಾಸ್‌ನಲ್ಲಿ ಭಾಗವಹಿಸಿ, ಈಗಾಗಲೇ ಆಚೆ ಬಂದಿರುವ ಆರ್‌ಜೆ ಅಮಿತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಬಿಗ್‌ಬಾಸ್‌ಗಿಂತ ಮುಂತೆ ಅಷ್ಟು ಪ್ರಸಿದ್ಧನಾಗಿರಲಿಲ್ಲ. ಆದರೆ ನನ್ನ ಐಡೆಂಟಿಟಿಗೆ ವಿಸಿಟಿಂಗ್ ಕಾರ್ಡ್ ಸಿಕ್ಕಂಗಾಯ್ತು ಎಂದಿದ್ದಾರೆ.
ಇನ್ನು ಅಮಿತ್ ಅವರು ಚಿಕ್ಕ ವಯಸ್ಸಿನಲ್ಲಿ ಏನಾಗ್ಬೇಕ ಅಂತಿದ್ರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಅಮಿತ್, ನಾನು ಚಿಕ್ಕವನಿದ್ದಾಗ ಕಮೀಷನರ್ ಆಗಬೇಕು ಅಂತಾ ನಿರ್ಧರಿಸಿದ್ದೆ. ಎಲ್ಲರಿಗೂ ಹಾಗೇ ಹೇಳ್ತಿದ್ದೆ. ಕೆಲವರು ಈಗ ಸಿಕ್ಕಾಗಲೂ ಕೇಳ್ತಾರೆ, ಏನಪ್ಪಾ ಅಮೀತ್ ಕಮಿಷನರ್ ಆದ್ಯಾ ಅಂತಾ. ಇಲ್ಲಾ ಅವರನ್ನೆಲ್ಲ ಸಂದರ್ಶಿಸೋ ರೇಡಿಯೋ ಜಾಕಿ ಆದೆ ಅಂತಾ ಹೇಳ್ತೀನಿ ಅಂತಾರೆ ಅಮಿತ್.
ಇನ್ನು ಚಿಕ್ಕಂದಿನಲ್ಲಿ ರೇಡಿಯೋ ಬಗ್ಗೆ ಪ್ರೀತಿ ಇತ್ತು. ಅಮ್ಮ ಪ್ರತೀದಿನ ರೇಡಿಯೋ ಕೇಳ್ತಿದ್ರು. ಅವರ ಜತೆ ನಾನೂ ರೇಡಿಯೋ ಕೇಳಿ ಬೆಳೆದಿದ್ದೆ. ಆರ್‌ಜೆ ಗಳು ಮಾತಾಡೋದು ಕೇಳಿ ಖಿುಷಿಯಾಗುತ್ತಿತ್ತು. ಅದರಲ್ಲಿ ಬರುವ ಸ್ಪರ್ಧೆಗಳಲ್ಲಿ ಭಾಗವಹಿಸಿ, ರೇಡಿಯೋ ಸ್ಟೇಶನ್ ಗೆ ಹೋಗಿ ಫೇವರಿಟ್ ಆರ್‌ಜೆ ಯನ್ನು ಭೇಟಿ ಮಾಡಿ ಮಾತಾಡುತ್ತಿದ್ದೆ. ಇದೆಲ್ಲಾ ಆರ್ಜೆಯಾಗಲು ಪ್ರೇರಣೆಯಾಯಿತು ಅಂತಾರೆ ಅಮೀತ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




