Thursday, October 23, 2025

Latest Posts

‘ಕ್ರಾಂತಿ ವಾಂತಿ ಭ್ರಾಂತಿ ಇಲ್ಲ.. ನಾವೂ ಆರಾಮಾಗಿ ಇದ್ದೇವೆ’

- Advertisement -

ನವೆಂಬರ್ ಕ್ರಾಂತಿ ಇಲ್ಲ.. ವಾಂತಿ ಇಲ್ಲ.. ಭ್ರಾಂತಿಯೂ ಇಲ್ಲ. ನೀವೂ ಆರಾಮಾಗಿ ಇರಿ. ನಾವೂ ಆರಾಮಾಗಿ ಇದ್ದೇವೆ. ನೀವು ಅದರ ಬಗ್ಗೆ ಟೆನ್ಶನ್ ತಗೋಬೇಡಿ. ಹೀಗಂತ ಮಾಧ್ಯಮಗಳಿಗೆ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ. ಯತೀಂದ್ರ ಅವ್ರು, ಮುಖ್ಯಮಂತ್ರಿ ರೀತಿಯ ಪ್ರಗತಿಪರ ಚಿಂತಕರು ಅಂತ ಹೇಳಿದ್ದಾರೆ. ನಾವೂ ಅದನ್ನೇ ಹೇಳುತ್ತೇವೆ. ಅದರಲ್ಲಿ ತಪ್ಪೇನಿದೆ. ಅದರಲ್ಲಿ ಕ್ರಾಂತಿ ಭ್ರಾಂತಿ ಏನೂ ಇಲ್ಲ. ನನಗೆ ದಯಮಾಡಿ ಈ ವಿಚಾರವನ್ನು ತಿಕ್ಕಿ ತಿಕ್ಕಿ ಕೇಳಬೇಡಿ. ಸಂಪುಟ ಪುನರ್‌ರಚನೆ ವಿಚಾರವಾಗಿ ನಿರ್ಧಾರ ಮಾಡಲು ಹೈಕಮಾಂಡ್ ಇದೆ. ಅತ್ಯುತ್ತಮವಾದ ಗಟ್ಟಿಯಾದ ಹೈಕಮಾಂಡ್ ನಮ್ಮ ಪಕ್ಷದಲ್ಲಿದೆ.

ಆರ್.ಅಶೋಕ್‌ಗೆ ಬೇರೆ ಕೆಲಸ ಏನಿದೆ. ಅವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಅವರು ಕೇವಲ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಯಾವ ಕೆಲಸ ಕಾರ್ಯಗಳು ಆಗಿಲ್ಲ ಅನ್ನೋದನ್ನ ಗಮನಕ್ಕೆ ತರಲಿ. ನಮಗಿಂತ ಹೆಚ್ಚಾಗಿ ನವೆಂಬರ್ ಕ್ರಾಂತಿ ಅವರ ನಿದ್ದೆಯನ್ನು ಗೆಡಿಸಿದೆ. ಕೇಂದ್ರ ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಅಂತ ತೋರಿಸಲಿ. ಈ ಹಿಂದೆ ಇದ್ದ ಯುಪಿಎ ಸರ್ಕಾರವೇ ಎಲ್ಲವನ್ನು ಮಾಡಿರೋದು. ರೈತರಿಗೆ ಡ್ಯಾಮ್ ಕಟ್ಟಿದ್ದಾರಾ?. ಕೊನೆ ಪಕ್ಷ ಏನು ಮಾಡಿದ್ದಾರೆಂದು ಹೇಳಲಿ. ಮೆಟ್ರೋ ಮಾಡಿದ್ದು, ಡ್ಯಾಮ್‌ಗಳನ್ನು ಕಟ್ಟಿದ್ದು ನಾವೇ. ಶಿಲಾನ್ಯಾಸ ಮಾಡಿದ್ದು ನಾವೇ. ರೈತರಿಗೆ ಅನುಕೂಲ ಮಾಡಿದ್ದು ನಾವೇ. ನಾವು ಇಟ್ಟ ಹೆಸರುಗಳನ್ನು ಬದಲಾಯಿಸಿದ್ದಾರೆ ಅಷ್ಟೇ.

ನಿರ್ಮಲ ಭಾರತವನ್ನು ಸ್ವಚ್ಛ ಭಾರತ ಅಂತ ಮಾಡಿದ್ದಾರೆ. ಬಿಜೆಪಿಯವರಿಗೆ ಸತ್ಯವನ್ನು ಹೇಳಿದರೆ ಯಾಕೆ ಮಿರ್ಚಿ ಇಟ್ಟಂತೆ ಆಗುತ್ತಿದೆ. ನಾನು ಕೂಡ ಆರ್‌ಎಸ್‌ಎಸ್ ಬಗ್ಗೆ ಕೇಳುತ್ತೇನೆ. ಆರ್‌ಎಸ್‌ಎಸ್ ದೇಶಭಕ್ತಿಯ ಯಾವ ಕೆಲಸ ಮಾಡಿದೆ?. ಸ್ವಾತಂತ್ರ ಹೋರಾಟ ಮಾಡಿದ್ದ ಅಂಬೇಡ್ಕರ್‌ರನ್ನ, ಸಂವಿಧಾನ ಬರೆದ ವ್ಯಕ್ತಿಯನ್ನೇ ವಿರೋಧ ಮಾಡಿದ ಸಂಘಟನೆ ಅದು.

ಸ್ವಾತಂತ್ರ ತಂದು ಕೊಟ್ಟ ಗಾಂಧಿಯನ್ನು ವಿರೋಧ ಮಾಡಿದ ಸಂಘ. ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನೇ ಏರಿಸಲಾಗದಂತ ಸಂಘಟನೆ ಅದು. ಇವರು ದೇಶಭಕ್ತರಾ? ಯಾವ ಆಧಾರದ ಮೇಲೆ ಇದು ದೇಶಭಕ್ತಿ ಇರುವಂತ ಸಂಸ್ಥೆ ಅಂತ ತಿಳಿಸಲಿ. ಅಸಲಿಗೆ ಆದೇಶ ಮಾಡಿದ್ದು ಜಗದೀಶ್ ಶೆಟ್ಟರ್ ಅವರೇ. ಆದೇಶ ಕಾಫಿಯನ್ನು ನಾವೇ ಕ್ಯಾಬಿನೆಟ್ ನಲ್ಲಿ ನೋಡಿದ್ದೇವೆ. ನಾವು ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆಂದು ಎಲ್ಲಿಯೂ ಹೇಳಿಲ್ಲ ಎಂದು, ಬಿಜೆಪಿಗರ ವಿರುದ್ಧ ಶಿವರಾಜ ತಂಗಡಗಿ ಗುಡುಗಿದ್ದಾರೆ.

- Advertisement -

Latest Posts

Don't Miss