Athani News: ಅಥಣಿ: ತಾಲೂಕಿನ ದರೂರ ದಿಂದ ಖವಟಕೊಪ್ಪವರೆಗೆ ರಸ್ತೆ ಕಾಮಗಾರಿಗೆ ಪೂಜೆ ಹಾಗೂ ದರೂರ ಗ್ರಾಮದ ಬನ್ನಿವಾರಿ ತೋಟದ ಮನೆಗಳಿಗೆ ನಿರಂತರ ವಿದ್ಯುತ ಸರಬರಾಜು ಕಾಮಗಾರಿಗೆ ಶಾಸಕ ಲಕ್ಷ್ಮಣ್ ಸವದಿ ಚಾಲನೆ ನೀಡಿದರು.
ಅಥಣಿ ಮತಕ್ಷೇತ್ರದಲ್ಲಿ ತೋಟದ ವಸತಿಗಳ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರತಿ ಮನೆಗೆ ನಿರಂತರ ಜ್ಯೋತಿ ವಿದ್ಯುತ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅಥಣಿ ಮತ ಕ್ಷೇತ್ರದ ಶಾಸಕರಾದ ಶಾಸಕ ಲಕ್ಷ್ಮಣ ಸವದಿ ಹೇಳಿದರು .
ಅದೇ ರೀತಿ ವಿದ್ಯುತ ಕ್ಷೇತ್ರದಲ್ಲಿ ಪ್ರತಿ ಗ್ರಾಮ ಹಾಗೂ ತೋಟದ ವಸತಿಗಳಿಗೆ 24 ಗಂಟೆಗಳ ಕಾಲ ವಿದ್ಯುತ್ಪೂರೈಕೆ ಮಾಡುತ್ತೇವೆ ಹಾಗೂ 110ಕೆವಿ ,ಹಾಗೂ 220 ಕೆವಿ ಸಾಮರ್ಥ್ಯ ಹೊಂದಿರುವ 5 ಹೊಸ ವಿದ್ಯುತ ಪ್ರವಹನ ಕೇಂದ್ರ ಗಳನ್ನು ಮಂಜೂರಾತಿ ಮಾಡಲಾಗಿದೆ ಎಂದು ಹೇಳಿದರು.
ಅನಂತರ ಮಾಧ್ಯಮದರೊಂದಿಗೆ ಮಾತನಾಡಿ ಸುಮಾರು 25ಸಾವಿರ ಅಂತರದಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಹಾಗೂ ಕೃಷ್ಣಾ ನದಿಗೆ ನೀರು ಯಾರು ಸಹ ಬಿಡಿಸಿಲ್ಲ ತಾನಾಗೆ ಬರುತ್ತಿದೆ ಎಂದು ಜಿಲ್ಲೆಯ ಶಾಸಕರಿಗೆ ಹಾಗೂ ಸಚಿವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.




