Tuesday, September 16, 2025

Latest Posts

ಸಿನಿಮಾ ರಿಲೀಸ್ ಆದ್ರೂ ಪೇಮೆಂಟ್ ಇಲ್ಲ – ಯಶ್ ತಾಯಿ ಪುಷ್ಪ ವಿರುದ್ಧ ಆರೋಪ!

- Advertisement -

ರಾಕಿಂಗ್‌ ಸ್ಟಾರ್ ಯಶ್‌ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆ ಆಗಿತ್ತು. ಆಗಸ್ಟ್ 1ರಂದು ಅದ್ದೂರಿಯಾಗಿ ರಿಲೀಸ್ ಆಯಿತು. ಈಗ ಈ ಸಿನಿಮಾ ಒಟಿಟಿಗೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟಿಸಿದ ಸಹನಟ ಮಹೇಶ್‌ ಗುರು ತಮ್ಮ ಸಂಭಾವನೆ ಇನ್ನೂ ಸಿಕ್ಕಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಸಂಭಾವನೆ ಇನ್ನೂ ಸಿಗದೇ ಇದ್ದ ಕಾರಣ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಮಹೇಶ್‌ ಅವರು ತಮ್ಮ ವಿಡಿಯೋ ಸಂದೇಶದಲ್ಲಿ, ನಾನು ಮೂರು ತಿಂಗಳು ಪೃಥ್ವಿ ಅಂಬಾರ್ ಜೊತೆ ನಟಿಸಿದ್ದೇನೆ. ಮುಹೂರ್ತಕ್ಕೂ ಮುಂಚೆ ಅಡ್ವಾನ್ಸ್‌ ಭರವಸೆ ನೀಡಿದ್ದರು. ಸಿನಿಮಾ ಮುಗಿದರೂ ಪೇಮೆಂಟ್ ಸಿಕ್ಕಿಲ್ಲ. ಪ್ರೆಸ್ ಮೀಟ್‌, ಟ್ರೈಲರ್ ಲಾಂಚ್‌ಗೆ ಸಹ ಕರೆಯಲಿಲ್ಲ ಎಂದು ಆರೋಪಿಸಿದ್ದಾರೆ.

ನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿ ಕಲಾವಿದ. ಸಿನಿಮಾ, ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ರಿಲೀಸ್ ಆಯಿತು. ಯಶ್ ತಾಯಿ ಪುಷ್ಪ ಅವರು ಇದನ್ನು ನಿರ್ಮಾಣ ಮಾಡಿದ್ದರು. ಪೃಥ್ವಿ ಅಂಬರ್ ಸಹ ನಟನಾಗಿ ನಾನು ಸಿನಿಮಾದಲ್ಲಿ ಇದ್ದೆ. ಮೂರು ತಿಂಗಳಿಗೂ ಅಧಿಕ ಕಾಲ ಸಿನಿಮಾ ಶೂಟ್​ನಲ್ಲಿ ಭಾಗಿ ಆಗಿದ್ದೆ ಎಂದು ಅವರು ಹೇಳಿದರು.

ಡಬ್ಬಿಂಗ್ ಮುಗಿಸಿದ ನಂತರ ಪೇಮೆಂಟ್ ಕೇಳಿದಾಗ ‘ಬಂದ ತಕ್ಷಣ ಕೊಡ್ತೀವಿ’ ಎಂದು ಉತ್ತರ ಸಿಕ್ಕಿತು. ಆದರೆ ನಂತರ ಯಾವುದೇ ಸಂಪರ್ಕಕ್ಕೂ ಸಾಧ್ಯವಾಗಿಲ್ಲ. ನಾನು ಮೋಸಹೋಗಿದ್ದೇನೆ ಎಂಬ ಭಾವನೆ ಆಗುತ್ತಿದೆ. ಈ ವಿಡಿಯೋ ಮೂಲಕ ಪುಷ್ಪ ಮೇಡಂ ಅವರಿಗೆ ನನ್ನ ಸ್ಥಿತಿ ತಿಳಿಯಬೇಕು. ಯಶ್ ತಾಯಿಗೆ ತಲುಪೋವರೆಗೂ ಶೇರ್ ಮಾಡಿ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss