ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಚುನಾವಣೆಯಲ್ಲಿ 25 ಸೀಟ್ ಗೆಲ್ಲಿಸೋ ಮೂಲಕ ಬಿಜೆಪಿ ಹೈಕಮಾಂಡ್ ಭೇಷ್ ಎನ್ನುವಂತೆ ಮಾಡಿದ್ರು. ಆದ್ರೆ ಇದೇ ವಿಷಯವನ್ನ ಪ್ಲ,ಸ್ ಪಾಯಿಂಟ್ ಆಗಿ ಇಟ್ಟುಕೊಂಡ ಬಿಎಸ್ವೈ ಕೇಂದ್ರ ಸಂಪುಟದಲ್ಲಿ ತಮ್ಮ ಕೆಲ ಆಪ್ತರಿಗೆ ಸೀಟ್ ಪಕ್ಕಾ ಆಗುತ್ತೆ ಅಂತ ನಿರೀಕ್ಷೆ ಯಿಟ್ಟುಕೊಂಡಿದ್ರು. ವರಿಷ್ಠರನ್ನ ಭೇಟಿಯಾಗಿ ಕೆಲ ಹೆಸರುಗಳನ್ನೂ ಶಿಫಾರಸು ಮಾಡಿದ್ರಂತೆ. ಆದ್ರೆ ಈ ಕಸರತ್ತು ವರ್ಕೌಟ್ ಆಗದೆ ಬಿಎಸ್ವೈಗೆ ಹಿನ್ನಡೆಯಾಗಿದೆ.
ರಾಜ್ಯ ಬಿಜೆಪಿ ಪಾಳಯದಲ್ಲಿ ಯಡಿಯೂರಪ್ಪ ಅತ್ಯುನ್ನತ ನಾಯಕ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಆದ್ರೆ ಇಂಥಾ ನಾಯಕನ ಆಪ್ತರಾದ ಶೋಭಾ ಕರಂದ್ಲಾಜೆ, ಬಿ.ವೈ ರಾಘವೇಂದ್ರ, ಶಿವಕುಮಾರ್ ಉದಾಸಿ,ಪ್ರತಾಪ್ ಸಿಂಹ, ಜಿ.ಎಸ್ ಬಸವರಾಜು, ಪಿ.ಸಿ ಗದ್ದಿಗೌಡರ್ ಸೇರಿದಂತೆ ಇವರ ಪೈಕಿ ಕೆಲವರಿಗೆ ಕೇಂದ್ರ ಸಂಪುಟದಲ್ಲಿ ಜಾಗ ಸಿಗುತ್ತೆ ಅಂತ ಬಿಎಸ್ವೈ ಅಂದುಕೊಂಡಿದ್ರು. ಇವ್ರೆಲ್ಲರ ಪರ ಬಿಜೆಪಿ ರಾಷ್ಟ್ರೀಯ ಅಧ್ಯಶಕ್ಷ ಅಮಿತ್ ಶಾ ಭೇಟಿಯಾಗಿ ಮನವಿಯನ್ನೂ ಮಾಡಿಕೊಂಡಿದ್ರು. ಆದ್ರೆ ಇವ್ರಲ್ಲಿ ಒಬ್ಬರಿಗೂ ಕೂಡ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗದೆ ಬಿಎಸ್ವೈ ನಿಕಟವರ್ತಿಗಳು ಅಸಮಾಧಾನಿತರಾಗಿದ್ದಾರೆ.
ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸದಾನಂದಗೌಡ ಮತ್ತು ಪ್ರಹ್ಲಾದ್ ಜೋಶಿಯವರಿಗೆ ಮಾತ್ರ ಕ್ಯಾಬಿನೇಟ್ ಮಂತ್ರಿ ದರ್ಜೆ ನೀಡಲಾಗಿದೆ. ಆದ್ರೆ ಲಿಂಗಾಯತ ಮುಖಂಡರಾಗಿರೋ ಸುರೇಶ್ ಅಂಗಡಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ.
ಯಡಿಯೂರಪ್ಪರವರ ಎಲ್ಲಾ ಆಪ್ತರನ್ನು ಹೊರಗಿಟ್ಟಿರೋದಲ್ಲದೆ, ರಾಜ್ಯದಲ್ಲಿ ವಿವಾದಾತ್ಮಕ ನಾಯಕರು ಅಂತ ಗುರುತಿಸಿಕೊಂಡಿರೋ ಮುಖಂಡರನ್ನೂ ದೂರವಿಡಲಾಗಿದೆ. ಇವರೆಲ್ಲರ ಪೈಕಿ ಶೋಭಾ ಕರಂದ್ಲಾಜೆ ಪರ ಬಿಎಸ್ ವೈ ಭರ್ಜರಿ ಲಾಬಿ ನಡೆಸಿದ್ರು ಎನ್ನಲಾಗಿದೆ. ಆದ್ರೆ ಅದ್ಯಾಕೋ ಏನೋ ಬಿಜೆಪಿ ವರಿಷ್ಠರು ಶೋಭಕ್ಕನ ಹೆಸರನ್ನೂ ಕೈಬಿಟ್ಟಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡು ನಿನ್ನೆ ಬೆಳಗ್ಗೆ 11 ಗಂಟೆಯಿಂದಲೇ ಶೋಭಾಕರಂದ್ಲಾಜೆ ಮುನಿಸಿಕೊಂಡು ತಮ್ಮ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಅದನೇ ಇರಲಿ ಯಡಿಯೂರಪ್ಪರವನ್ನು ಸಂತೋಷಪಡಿಸೋಕ್ಕಾದ್ರೂ ಶೋಭಕರಂದ್ಲಾಜೆ, ರಾಘವೇಂದ್ರ ಅಥವಾ ಉದಾಸಿಯವರನ್ನು ವರಿಷ್ಠರು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿತ್ತು ಅನ್ನೋ ಮಾತು ಬಿಜೆಪಿ ಪಾಳಯದಲ್ಲೇ ಕೇಳಿಬರುತ್ತಿದೆ.