ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವ ಯೋಚನೆ ಇಲ್ಲ; ಕರ್ನಾಟಕ ಸರ್ಕಾರ ಅಫಿಡವಿಟ್

www.karnatakatv.net: ರೋಹಿಂಗ್ಯಾ ಮುಸ್ಲಿಮರು ನಗರದಲ್ಲಿ 72 ಇದ್ದು, ಅವರನ್ನು ಗಡಿಪಾರು ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕರ್ನಾಟಕ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ಬೆಂಗಳೂರಿನಲ್ಲಿ ರೋಹಿಂಗ್ಯಾ ಮುಸ್ಲಿಮರು ವಿವಿಧೆಡೆ ಹೊಟ್ಟೆಪಾಡಿಗೆ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ. ಗಡಿಪಾರು ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಗಡಿಪಾರು ಮಾಡಲು ಸಲ್ಲಿಸಿರುವ ಅರ್ಜಿಯನ್ನ ವಜಾಮಾಡಿ ಎಂದು ಸುಪ್ರೀಂಕೋರ್ಟ್ ನಲ್ಲಿ ಕರ್ನಾಟಕ ಸರ್ಕಾರದಿಂದ ಹೇಳಿಕೆ ನೀಡಿದೆ. ಬಿಜೆಪಿಯ ಅಶ್ವಿನಿ ಉಪಾಧ್ಯಾಯ ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದರು. ರೋಹಿಂಗ್ಯಾ ಮುಸ್ಲಿಮರನ್ನ ಗಡಿಪಾರು ಮಾಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

About The Author