Udupi: ಭಾರತದಲ್ಲಿರುವ ಪ್ರಾಚೀನ, ಪ್ರಸಿದ್ಧ, ಶ್ರೀಮಂತ ದೇವಸ್ಥಾನಗಳಲ್ಲಿ ಉಡುಪಿ ಕೃಷ್ಣ ದೇವಸ್ಥಾನ ಕೂಡ 1. ಈ ದೇವಸ್ಥಾನಕ್ಕೆ ಸಾಮಾನ್ಯ ಭಕ್ತರಿಂದ ಹಿಡಿದು, ವಿಐಪಿ ಭಕ್ತರು, ರಾಜಕಾರಣಿಗಳು, ಕಲಾವಿದರು ಹೀಗೆ ಅನೇಕರು ದೇವರ ದರ್ಶನಕ್ಕಾಗಿ ಬರುತ್ತಲೇ ಇರುತ್ತಾರೆ. ಹಾಗೆ ಬಂದವರು ಮನಬಂದಂತೆ ವಸ್ತ್ರ ಧರಿಸಿ ಬರುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಬರುವಂತಿಲ್ಲ.
ಏಕೆಂದರೆ, ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ನೀವು ಬೀಚ್‌ಗೆ ಹೋಗಿ, ಬರ್ಮೋಡಾ, ಸ್ಕರ್ಟ್, ಶಾರ್ಟ್ ಧರಿಸಿ ದೇವಸ್ಥಾನಕ್ಕೆ ಬರುವಂತಿಲ್ಲ. ಬದಲಾಗಿ ಶಾಲು ಪಂಚೆ, ಸೀರೆ, ಚೂಡಿದಾರದಂಥ ವಸ್ತ್ರ ಧರಿಸಿಯೇ ಶ್ರೀಕೃಷ್ಣನ ದರ್ಶನಕ್ಕೆ ಬರಬೇಕು. ಪುರುಷರು ಅಂಗಿ ತೆಗೆದರೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಇದೀಗ ಪರ್ಯಾಯ ಶುರುವಾಗಿದ್ದು, ಸಾವಿರ ಸಾವಿರ ಜನ ಕಾರ್ಯಕ್ರಮ ನೋಡಲು, ದೇವರ ದರ್ಶನಕ್ಕಾಗಿ ಬರುತ್ತಿದ್ದಾರೆ. ಅಂಥದ್ರಲ್ಲಿ ಕೆಲವರು ಸರಿಯಾಗಿ ಉಡುಪು ಧರಿಸದೇ, ಪ್ರವಾಸಕ್ಕೆ ಬಂದ ಹಾಗೆ ಬರುತ್ತಿದ್ದಾರೆ. ಈ ಕಾರಣಕ್ಕೆ ಇಲ್ಲಿನ ಆಡಳಿತ ಮಂಡಳಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಜಾರಿ ಮಾಡಿದೆ.




