ಸಾಮಾನ್ಯವಾಗಿ ಜಾಬ್ ಮಾಡ್ತಿರೋರು ನೌಕರಿ, ಲಿಂಕ್ಡಿನ್ ಸೇರಿದಂತೆ ಹವಾರು ಜಾಬ್ ಸರ್ಚ್ ಆ್ಯಪ್ ಗಳನ್ನ ಬಳಸ್ತಾರೆ. ಅದ್ರಲ್ಲಿ ದಿನನಿತ್ಯ ಸಾಕಷ್ಟು ಜಾಹಿರಾತುಗಳನ್ನ ಕೆಲಸಕ್ಕೆ ಸಂಬಂಧಪಟ್ಟಂತೆ ಬರ್ತಾನೆ ಇರ್ತಾವೆ. ಆದ್ರೆ ಇಲ್ಲೊಂದು ಜಾಹೀರಾತು ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೌದು ಜಾಬ್ ಸರ್ಚಿಂಗ್ ಆ್ಯಪ್ ಆಗಿರೋ ಲಿಂಕ್ಡಿನ್ ನಲ್ಲಿ ನೋಯ್ಡಾದ ಒಂದು ಸಂಸ್ಥೆ ನೀಡಿರೋವಂತ ಜಾಹೀರಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಮುಖ್ಯವಾಗಿ ದಕ್ಷಿಣ ಭಾರತದವ್ರಿಗೆ ಅವಕಾಶ ಇಲ್ಲ ಅನ್ನೋ ಜಾಹಿರಾತು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಅಂದಹಾಗೆ ನೋಯ್ಡಾದಲ್ಲಿರುವ ಡೇಟಾ ವಿಶ್ಲೇಷಕ ಹುದ್ದೆಗಾಗಿ ಈ ಜಾಹೀರಾತು ಪ್ರಕಟಿಸಿದ್ದು , 4+ ವರ್ಷ ಉದ್ಯೋಗ ಅನುಭವ ಹೊಂದಿರೋ ಅಭ್ಯರ್ಥಿಗಳ ಅಗತ್ಯ ಇದೆ ಅನ್ನೋದನ್ನ ಹೇಳಲಾಗಿದೆ. ಆದರೆ ಟೆಕ್ನಾಲಜಿಗೆ ಸಂಬಂಧ ಪಟ್ಟ ವಿಷಯಗಳಲ್ಲಿ ಪರಿಣತಿ ಹೊಂದಿದ್ರೂ ಕೂಡ ದಕ್ಷಿಣ ಭಾರತದ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಹರಲ್ಲ ಎಂಬ ಅನ್ನೋದನ್ನ ಮೆನ್ಷನ್ ಮಾಡಿ ಜಾಹೀರಾತು ನೀಡಲಾಗಿದೆ. ಇದೇ ವಿಚಾರ ಸದ್ಯ ವಿವಾದಕ್ಕೀಡಾಗಿದೆ.
ಇನ್ನು ಈ ಜಾಹೀರಾತು ಪ್ರಕಟವಾಗ್ತಿದ್ದಂತೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು , ದಕ್ಷಿಣದ ಅಭ್ಯರ್ಥಿಗಳು ಸಾಕಷ್ಟು ಆಕ್ರೋಶ ಹೊರಹಾಕ್ತಿದ್ದಾರೆ. ಇದು ತಾರತಮ್ಯ ನೀತಿಯನ್ನ ಹೊಂದಿದೆ, ಇದಕ್ಕೆ ಅವಕಾಶ ನೀಡಬಾರದು ಅಂದಿದ್ದಾರೆ.
ಇನ್ನು ಈ ಬಗ್ಗೆ ಹಲವರು ಕಮೆಂಟ್ ಮಾಡಿದ್ದು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಉತ್ತಮವಾಗಿ ಹಿಂದಿ ಬಲ್ಲ ಅನೇಕ ಜನ ಕೇರಳದವರನ್ನ ನಾನು ನೋಡಿದ್ದೇನೆ. ಕೇವಲ ಹಿಂದಿ ಬರಬೇಕು ಅನ್ನೋ ಕಾರಣಕ್ಕೆ ನೀವು ದಕ್ಷಿಣ ಭಾರತದವರನ್ನ ವಿರೋಧಿಸುತ್ತಿದ್ದೀರಿ ಎಂದಾದ್ರೆ, ಅದು ತಾರತಮ್ಯ. ಕೆಲಸ ಮಾಡೋಕೆ ಹಿಂದಿ ಯಾಕೆ ಅಷ್ಟೊಂದು ಮುಖ್ಯ ಅಂತ ದಕ್ಷಿಣ ಭಾರತದವ್ರೊಬ್ರು ಪ್ರಶ್ನೆ ಮಾಡಿದ್ದಾರೆ.