ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ ನೋಕಿಯಾ 5310

ಜುಲೈ ತಿಂಗಳಲ್ಲಿ ನೋಕಿಯಾ 5310 ಭಾರತದಲ್ಲಿ ಮೊಬೈಲ್ ಲಾಂಚ್ ಆಗಲಿದೆ. ಇದರ ಫೀಚರ್ಸ್ ನೋಡುವುದಾದರೆ,

ನೋಕಿಯಾ 5310 ಮೊಬೈಲ್ 2.40 ಇಂಚು ಡಿಸ್‌ಪ್ಲೇ ಹೊಂದಿದೆ. ಇದು ಸಿಂಗಲ್ ಕ್ಯಾಮೆರಾ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಇರುವುದಿಲ್ಲ. ವಿ.ಜಿ ಬ್ಯಾಕ್ ಕ್ಯಾಮೆರಾ ಹೊಂದಿದೆ. 8 ಜಿ.ಬಿ ರ್ಯಾಮ್ ಹೊಂದಿದ್ದು, 16 ಎಂ.ಬಿ ಇನ್‌ಬಿಲ್ಟ್ ಸ್ಟೋರೇಜ್ ಮೆಮೋರಿ ಹೊಂದಿದೆ. ಅಗತ್ಯವಿದ್ದಲ್ಲಿ 32 ಜಿಬಿ ಕ್ಯಾಪ್ಯಾಸಿಟಿಯ ಮೈಕ್ರೋ ಎಸ್‌ಡಿ ಕಾರ್ಡ್ ಅಳವಡಿಸಬಹುದು.

ನೋಕಿಯಾ 5310 ಮೊಬೈಲ್ ಕೀಪ್ಯಾಡ್ ಸೆಟ್ ಆಗಿದ್ದು, 1200 ಎಮ್‌ಎಹೆಚ್ ರಿಮೂವೇಬಲ್ ಬ್ಯಾಟರಿ ಹೊಂದಿದೆ. ಅಲ್ಲದೇ, ಈ ಮೊಬೈಲ್ ಬ್ಲೂಟೂತ್ ಮತ್ತು ಎಫ್‌ ಎಮ್‌ನ್ನು ಒಳಗೊಂಡಿದ್ದು, 3.5 ಎಮ್ ಎಮ್ ಹೆಡ್‌ಫೋನ್ ದೊರೆಯುತ್ತದೆ.

ನೋಕಿಯಾ 5310 ಮೊಬೈಲ್ ಡ್ಯೂಯೆಲ್ ಸಿಎಂ ಸ್ಲಾಟ್ ಹೊಂದಿದ್ದು, 2 ಸ್ಲಾಟ್‌ಗಳು ಜಿಎಸ್‌ಎಮ್ ಆಗಿರುತ್ತದೆ. ಇನ್ನು ಇದರ ಬಣ್ಣದ ಬಗ್ಗೆ ಹೇಳುವುದಾದರೆ, ಈ ಮೊಬೈಲ್ ಎರಡು ಬಣ್ಣಗಳನ್ನ ಒಳಗೊಂಡಿದೆ. ವೈಟ್ & ರೆಡ್ ಮತ್ತು ಬ್ಲ್ಯಾಕ್ & ರೆಡ್ ಬಣ್ಣಗಳಲ್ಲಿ ನೋಕಿಯಾ 5310 ಮೊಬೈಲ್ ಲಭ್ಯವಿದೆ.

ಇದೇ ವರ್ಷ ಮಾರ್ಚ್ 19ಕ್ಕೆ ವಿಶ್ವದಾದ್ಯಂತ ನೋಕಿಯಾ 5310 ಮೊಬೈಲ್ ಲಾಂಚ್ ಆಗಿದ್ದು, ಜುಲೈ ತಿಂಗಳಲ್ಲಿ ಭಾರತದಲ್ಲಿ ಲಾಂಚ್ ಆಗಲಿದೆ. ಇನ್ನು ಭಾರತದಲ್ಲಿ ಇದರ ಬೆಲೆ 3,190 ರೂಪಾಯಿ ಎನ್ನಲಾಗಿದೆ.

https://youtu.be/QJjNPyyJl-E

About The Author