ಸ್ಟಾವೆಂಜರ್ (ನಾರ್ವೆ): ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಆರ್ಯನ್ ತಾರಿ ವಿರುದ್ಧ ಗೆದ್ದು ನಾರ್ವೆ ಚೆಸ್ ಟೂರ್ನಿಯಲ್ಲಿ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
9ನೇ ಹಾಗೂ ಅಂತಿಮ ಸುತ್ತಿನಲ್ಲಿ 52 ವರ್ಷದ ಭಾರತದ ದಂತಕತೆ ವಿಶ್ವನಾಥನ್ ಆನಂದ್ ಆರ್ಮಾಗೆಡ್ಡಾನ್ (ಟೈ ಬ್ರೇಕರ್) ಸುತ್ತಿನಲ್ಲಿ ಆರ್ಯನ್ ತಾರಿ ವಿರುದ್ಧ 14.5 ಅಂಕಗಳನ್ನು ಪಡೆದು ಗೆಲುವು ಕಂಡರು. ಇದಕ್ಕೂ ಮುನ್ನ 22 ಮುನ್ನಡೆಗಳೊಂದಿಗೆ ಡ್ರಾ ಕಂಡಿತ್ತು.
ಟೂರ್ನಿಯ ಆರಂಭದಲ್ಲಿ ವಿಶ್ವನಾಥನ್ ಆನಂದ್ ಉತ್ತಮ ಆರಂಭ ಪಡೆದರು. ಆದರೆ ಎರಡನೆ ಅವಧಿಯಲ್ಲಿ ಗೆಲ್ಲಲು ವಿಫಲರಾದರು.
ಮೊದಲ ಸ್ಥಾನವನ್ನು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸನ್ (16.5 ಅಂಕ), ಎರಡನೆ ಸ್ಥಾನವನ್ನು ಅಜೆರ್‍ಬೈಜಾನ್‍ನ ಶಾಕ್ರಿಯಾರ್ (15.5 ಅಂಕ) ಪಡೆದರು.
ತಾರಿ ಹಾಗೂ ಆನಂದ್ ವಿರುದ್ಧ ಸೋತ ಹೊರತಾಗಿಯೂ ಮ್ಯಾಗ್ನಸ್ ಕಾರ್ಲ್‍ಸನ್ ಅಗ್ರಸ್ಥಾನ ಪಡೆದರು.




