www.karnatakatv.net :ತುಮಕೂರು: ಸತತ ಒಂದೂವರೆ ವರ್ಷದಿಂದ ಮುನಿಗಳು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾಗೃತಿ ಮೂಡಿಸುವಲ್ಲಿ ಜೈನ ದಿಗಂಬರ ಮುನಿಗಳು ಮಗ್ನರಾಗಿದ್ದಾರೆ. ವಿವಿಧ ಬಸದಿಗಳಲ್ಲಿ ಪ್ರವಚನ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಜೈನ ಭವನಕ್ಕೆ ಮುನಿಗಳಾದ ಪ.ಪೂ.ಮುನಿಶ್ರೀ ೧೦೮ ಅಮೋಘ ಕೀರ್ತಿ ಮಹಾರಾಜ್ ಮತ್ತು ಪ.ಪೂ.ಮುನಿಶ್ರೀ ೧೦೮ ಅಮರಕೀರ್ತಿ ಮಹಾರಾಜ್ಭೇಟಿ ನೀಡಿದ್ದರು. ಜಿಲ್ಲೆಯ ವಿವಿಧ ಬಸದಿಗಳಿಗೆ ಭೇಟಿ ನೀಡುತ್ತಿರುವ ಮುನಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಇಡೀ ಪ್ರಪಂಚವನ್ನ ಕಾಡುತ್ತಿರುವ ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ಅವರಲ್ಲಿ ಆತ್ಮಸ್ಥೃರ್ಯ ತುಂಬುತಿದ್ದಾರೆ. ಕೊರೊನಾದಿಂದ ಪಾರಾಗಲು ಯಾವೆಲ್ಲಾ ಕಟ್ಟುಪಾಡು ಹಾಕಿಕೊಳ್ಳಬೇಕು ಎಂಬುದನ್ನು ಜೈನ ಮುನಿಗಳು ತಮ್ಮ ಪ್ರವಚನ ಮೂಲಕ ಸಾರುವ ಕಾರ್ಯ ಮಾಡುತ್ತಿದ್ದಾರೆ.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಜೈನ ಮುನಿಗಳಾದ ಪ.ಪೂ.ಮುನಿಶ್ರೀ ೧೦೮ ಅಮೋಘ ಕೀರ್ತಿ ಮಹಾರಾಜ್ ಮತ್ತು ಪ.ಪೂ.ಮುನಿಶ್ರೀ ೧೦೮ ಅಮರಕೀರ್ತಿ ಮಹಾರಾಜ್ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು. ಜಗತ್ತಿನಲ್ಲಿಂದು ಧಾರ್ಮಿಕತೆ ಕಲುಷಿತಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಜೈನ ಧರ್ಮದ ಸತ್ಯ, ಅಹಿಂಸೆ ಮುಂತಾದ ತತ್ವ ಸಿದ್ಧಾಂತಗಳ ಪಾಲನೆ ಅತ್ಯಂತ ಅವಶ್ಯವಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ಮಹಾತ್ಮ ಗಾಂಧೀಜಿ ಅಹಿಂಸಾ ತತ್ವದ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದನ್ನ ಸ್ಮರಿಸಿದರು.
ಮಾದಕ ವಸ್ತುಗಳ ನಶೆಯಿಂದ ನಮ್ಮ ಜೀವನ ಹಾಳಾಗುವುದು ಖಚಿತ. ನಮಗೆ ಬೇಕಿರುವುದು ಆ ನಶೆಯಲ್ಲ. ಜ್ಞಾನದ ಅಹಿಂಸೆಯ ನಶೆ ನಮ್ಮನ್ನು ಆವರಿಸಬೇಕಿದೆ. ಈ ಅಹಿಂಸೆಯ ದಾರಿಯಲ್ಲಿ ಮನಃಶಾಂತಿ ದೊರೆಯುತ್ತದೆ. ಹಿಂಸೆಯ ಆಚರಣೆ ಯಾವ ಧರ್ಮದಲ್ಲಿಯೂ ಇಲ್ಲ. ಅಹಿಂಸೆಯೇ ಪರಮ ಧರ್ಮ. ನಶೆರಹಿತ ಶಾಖಾಹಾರ ಸೇವನೆಯಿಂದ ಅಹಿಂಸೆ ಮತ್ತು ಸದ್ಭಾವನೆಯಿಂದ ಕೂಡಿದ ಜೀವನ ಅನುಕರಣೀಯವಾಗುತ್ತದೆ. ಇದನ್ನು ಪ್ರಜ್ಞಾಪೂರ್ವಕವಾಗಿ ಪ್ರತಿಯೊಬ್ಬರೂ ಆಚರಿಸಿದರೆ ನಮ್ಮ ಮತ್ತು ಸುತ್ತಮುತ್ತಲಿನ ಪರಿಸರ ಸುಂದರವಾಗಿರುತ್ತದೆ. ಅನ್ನೋ ಸಂದೇಶ ನೀಡಿದ್ದಾರೆ ಜೈನ ಮುನಿಗಳು ಇಂದಿನ ಸಮಾಜಕ್ಕೆ ಇಂತಹ ಮಾಗದರ್ಶನ ಅವಶ್ಯಕ ಎಂದು ತಿಳಿಸಿದರು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು