Friday, December 13, 2024

Latest Posts

ಬಿಜೆಪಿಗೆ ಸೇರುವುದಿಲ್ಲ; ಅಮರೀಂದರ ಸಿಂಗ್ ..!

- Advertisement -

www.karnatakatv.net :ಅಮರೀಂದರ ಸಿಂಗ್  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬಿಜೆಪಿಗೆ ಸೇರುತ್ತಾರೆ ಎಂಬುದು ಅನುಮಾನಗಳಿಗೆ ಕಾರಣ ವಾಗಿದೆ.

ಹೌದು, ಪಂಜಾಬ್ ನ ಮಾಜಿ ಮುಖ್ಯ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದಕ್ಕೆ ಅವರು ಬಿಜೆಪಿಗೆ ಸೇರುವ ಅನುಮಾನಗಳು ಎಲ್ಲರಲ್ಲೂ ಕಾಡುತ್ತಿದೆ. ಆದರೆ ಇದಕ್ಕೆಲ್ಲ ಉತ್ತರವನ್ನು ಕೊಟ್ಟ ಅಮರೀಂದರ್ ಸಿಂಗ್  ತಾವು ಭಾರತೀಯ ಜನತಾ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

“ಈವರೆಗೂ ನಾನು ಕಾಂಗ್ರೆಸ್‌ ಆಗಿಯೇ ಇದ್ದೇನೆ. ಆದರೆ ನಾನು ಕಾಂಗ್ರೆಸ್‌ ಆಗಿಯೇ ಉಳಿಯಲಾರೆ. ಆದರೆ ನಾನು ಬಿಜೆಪಿಗೂ ಕೂಡಾ ಸೇರ್ಪಡೆಯಾಗುವುದಿಲ್ಲ. ಅಮಿತ್ ಶಾಅವರನ್ನು ಭೇಟಿಯಾಗಿದ್ದಕ್ಕೆ ನಾನು ಬಿಜೆಪಿ ಸೇರುತ್ತೆನೆ ಎಂದು ತಿಳಿಸುಕೊಳ್ಳುವುದು ತಪ್ಪು, ನನ್ನನ್ನು ಈ ರೀತಿ ನಡೆಸಿಕೊಳ್ಳಲು ಇನ್ನು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮುಖ್ಯ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವಾರು ಶಾಸಕರು, ಸಚಿವರುಗಳು ಅವರ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ ಪಂಜಾಬ್‌ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್‌ ಸಿಂಗ್‌ ರಾಜೀನಾಮೆಯನ್ನು ಈ ತಿಂಗಳ ಆರಂಭದಲ್ಲಿ ನೀಡಿದ್ದಾರೆ. ಈ ನಡುವೆ ಅಮರೀಂದರ್‌ ಸಿಂಗ್‌ ನವದೆಹಲಿಗೆ ಪ್ರಯಾಣ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಲು ದೆಹಲಿ ಗೆ ತೆರಳಿದ್ದಾರೆ ಎಂದು ಹೇಳಿದ್ದರು.  ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಅಮರೀಂದರ್‌ ಸಿಂಗ್‌ ಭೇಟಿಯಾಗಿದ್ದಾರೆ. ಈ ಹಿನ್ನೆಲೆ ಅಮರೀಂದರ್‌ ಸಿಂಗ್‌ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಡತೊಡಗಿದವು.

- Advertisement -

Latest Posts

Don't Miss