ಮಸ್ತ್ ಮಲೈಕಾ ಅಲ್ಲ – ಮಸ್ತ್ ನಿಶ್ವಿಕಾ : 6 ಪ್ಯಾಕ್ ಸೀಕ್ರೆಟ್ ಏನು ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅಭಿನಯದ ಬಹು ನಿರೀಕ್ಷೆಯ “ಮಾರ್ಕ್”(Mark) ಚಿತ್ರದ “ಮಸ್ತ್ ಮಲೈಕಾ” ಹಾಡು ಇಂದು ರಿಲೀಸ್ ಆಗಿದ್ದು ಸಕತ್ ವೈರಲ್ ಆಗ್ತಿದೆ, ಅದ್ರಲ್ಲಿ ಎಲ್ಲ ಗಮನವನ್ನ ಹೆಚ್ಚಾಗಿ ಸೆಳೆಯುತ್ತಿರುವುದು ನಾಯಕಿ “ನಿಶ್ವಿಕಾ ನಾಯ್ಡು” ಅವರ 6 – ಪ್ಯಾಕ್ ಸ್ಟ್ರಕ್ಚರ್, ಸಿನಿಮಾ ರಂಗದಲ್ಲಷ್ಟೇ ಅಲ್ಲ, ನಿಶ್ವಿಕಾ(Nishvika) ಅಭಿಮಾನಿಗಳೂ ಕೂಡ ನಿಶ್ವಿಕಾ 6 – ಪ್ಯಾಕ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.ಕನ್ನಡ ಸಿನಿಮಾ ರಂಗದಲ್ಲಿ 6 – ಪ್ಯಾಕ್ ಮೈಂಟೈನ್ ಮಾಡ್ತಿರೋ ನಟಿಯರ ಪಟ್ಟಿಯಲ್ಲಿ ನಿಶ್ವಿಕಾ ನಾಯ್ಡು ನಂಬರ್ ಒನ್ ಸ್ಥಾನದಲ್ಲಿದ್ದಾರೆ…

ಇನ್ನು ಇಲ್ಲಿ ಮತ್ತಷ್ಟು ಹೈಲೈಟ್ ಆಗ್ತಿರೋದು ಕಿಚ್ಚ ಸುದೀಪ್ ಅವರ ಸ್ಟೆಪ್ಸ್ ಮತ್ತು ಅವರ ಕಿಲ್ಲಿಂಗ್ ಲುಕ್ಸ್ , ಅಷ್ಟೇ ಅಲ್ಲ ಈ ಹಾಡನ್ನ ಹಾಡಿರೋದು ಸ್ವತಃ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಅವರು ಅನ್ನೋದು ಮತ್ತಷ್ಟು ಹೆಮ್ಮೆ ಪಡುವಂಥ ವಿಚಾರವಾಗಿದೆ , ನಿಜಕ್ಕೂ ಸಾನ್ವಿ(Sanvi Sudeep) ಅಧ್ಭುತವಾಗಿ ಹಾಡಿದ್ದಾರೆ, ಮಗಳ ಧ್ವನಿಗೆ ಸ್ಟೆಪ್ ಹಾಕೋ ಅಪ್ಪ, ಇದೊಂದು ಅಧ್ಭುತ ಕ್ಷಣವೇ ಸರಿ.

“ಹಿತ್ತಲಕ ಕರಿಬೇಡ ಮಾವ” ಹಾಡಿನಷ್ಟೇ , ಮಸ್ತ್ ಮಲೈಕಾ(Masth Malaika) ಕೂಡ ಫೇಮಸ್ ಆಗೋ ಸಾಧ್ಯತೆಗಳು ಹೆಚ್ಚಾಗಿವೆ,ಒಟ್ಟಿನಲ್ಲಿ ಕಿಚ್ಚನ ಅಭಿಮಾನಿಗಳಿಗೆ ಕಿಚ್ಚನ ಸಕತ್ ಸ್ಟೆಪ್ಸ್ ನೋಡೋ ಭಾಗ್ಯ ಮತ್ತೊಮ್ಮೆ “ಮಸ್ತ್ ಮಲೈಕಾ” ಹಾಡಿನಿಂದ ಸಿಕ್ಕಿದೆ…

ವರದಿ : ಗಾಯತ್ರಿ ನಾಗರಾಜ್

 

About The Author