ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ ಕೆಜಿಎಫ್-2 ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದ್ದು, ನಂಬರ್-1 ಟ್ರೇಂಡಿಂಗ್ ನಲ್ಲಿದೆ. ಕೋಟಿಗಟ್ಟಲೇ ವೀವ್ಸ್ ಪಡೆದುಕೊಂಡಿರುವ ಟೀಸರ್ ಗೆ ದೇಶ-ವಿದೇಶಗಳಿಂದಲ್ಲೂ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಈ ನಡುವೆಯೇ ಕೆಜಿಎಫ್-2 ಟೀಸರ್ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಯಶ್ ಗೆ ನೋಟಿಸ್ ಕೊಟ್ಟಿದೆ.

ಕೆಜಿಎಫ್-2 ಟೀಸರ್ ನಲ್ಲಿ ಯಶ್ ಗನ್ ನಿಂದ ಸಿಗರೇಟ್ ಹಚ್ಚುವ ದೃಶ್ಯವಿದೆ. ಇದಕ್ಕೆ ನಿಯಮದ ಪ್ರಕಾರ ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎನ್ನುವ ಕ್ಯಾಪ್ಷನ್ ಹಾಕಬೇಕು. ಆದ್ರೆ ಟೀಸರ್ ನಲ್ಲಿ ಹಾಕಿಲ್ಲ. ಇದು ಧೂಮಪಾನ ಪ್ರಚೋದಿಸುತ್ತಿದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹೀಗಾಗಿ ಆ ದೃಶ್ಯ ತೆಗೆದು ಹಾಕುವಂತೆ ಆರೋಗ್ಯ ಇಲಾಖೆ ಹೇಳಿದೆ.

ಹಾಗ್ ನೋಡಿದ್ರೆ ಯಶ್ ಗೆ ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿರುವ ನಟ. ಅಲ್ಲದೇ ಸಾನಮಾಜಿಕ ಕಳಕಳಿ ಇರುವ ರಾಕಿಭಾಯ್ ಇಂತಹ ದೃಶ್ಯಗಳನ್ನು ಯುವ ಜನತೆ ಅನುಸರಿಸುವುದು ಕಾಮನ್. ಇದರಿಂದ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಯುವ ಜನರು ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.
