Wednesday, September 18, 2024

Latest Posts

ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುತ್ತ ಜೊಮೆಟೋದಲ್ಲಿ ನಿಮ್ಮಿಷ್ಟದ ತಿಂಡಿಯನ್ನು ಆರ್ಡರ್ ಮಾಡಬಹುದು

- Advertisement -

National news: ಕೆಲವರಿಗೆ ರೈಲಿನಲ್ಲಿ ಹೋಗುವಾಗ, ಮನೆಯ ಊಟವನ್ನೇ ತೆಗೆದುಕೊಂಡು ಹೋಗಲೇಬೇಕಾಗುತ್ತದೆ. ಏಕೆಂದರೆ, ರೈಲಿನಲ್ಲಿ ಸಿಗುವ ಊಟ ಕೆಲವರಿಗೆ ಹಿಡಿಸುವುದಿಲ್ಲ. ರುಚಿಯೂ ಇರುವುದಿಲ್ಲ ಮತ್ತು ಆರೋಗ್ಯಕ್ಕೂ ಕೆಟ್ಟದ್ದು ಅನ್ನೋದು ಹಲವರ ವಾದ. ಅಂಥವರು ಇನ್ನುಮುಂದೆ ರೈಲು ಪ್ರಯಾಣ ಮಾಡುತ್ತ, ಜೊಮೆಟೋದಲ್ಲಿ ನಿಮಗಿಷ್ಟವಾದ ತಿಂಡಿಯನ್ನು ಆರ್ಡರ್ ಮಾಡಿ, ತರಿಸಿಕೊಳ್ಳಬಹುದು.

ಜೊಮೆಟೋ ಇದೀಗ ರೈಲು ಪ್ರಯಾಣಿಕರಿಗೆ ಫುಡ್ ಡಿಲೆವರಿ ಆರಂಭ ಮಾಡಿದ್ದು, ನೀವು ಕುಳಿತಿರುವ ಭೋಗಿಗೇ ಬಂದು, ಡಿಲೆವರಿ ಬಾಯ್, ನೀವು ಆರ್ಡರ್ ಮಾಡಿದ ಆಹಾರವನ್ನು ಬಿಸಿಬಿಸಿಯಾಗಿಯೇ ನೀಡುತ್ತಾರೆ. ಭಾರತೀಯ ರೈಲ್ವೆ ಇಲಾಖೆಯೊಂದಿಗೆ ಜೊಮೆಟೋ ಒಪ್ಪಂದ ಮಾಡಿಕೊಂಡಿದ್ದು, ನೂರಕ್ಕೂ ಹೆಚ್ಚು ರೈಲುಗಳಲ್ಲಿ ಜೊಮೆಟೋ ಡಿಲೆವರಿ ಆರಂಭಿಸಿದೆ. ಈಗಾಗಲೇ 10ಲಕ್ಷ ಆರ್ಡರ್ ರೈಲಿನಲ್ಲಿ ಪಡೆದಿದ್ದು ಜೊಮೆಟೋಯ ಸಾಧನೆಯೇ ಸರಿ.

ಇನ್ನು ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ಈ ಪೋಸ್ಟ್‌ಗೆ ವಿವಿಧ ರೀತಿಯ ಕಾಮೆಂಟ್ಸ್ ಬಂದಿದೆ. ರೈಲಿನಲ್ಲಿ ಒಳ್ಳೆಯ ಆಹಾರ ಸಿಗುವುದಿಲ್ಲ. ಹಾಗಾಗಿ ಜೊಮೆಟೋದ ಈ ನಿರ್ಧಾರ ಚೆನ್ನಾಗಿದೆ ಎಂದಿದ್ದಾರೆ. ಇನ್ನು ಕೆಲವರು ರೈಲು ಲೇಟಾಗಿ ಬಂದರೆ, ಡಿಲೆವರಿ ಬಾಯ್, ಹೊತ್ತು ಕಳೆಯಬೇಕಾಗುತ್ತದೆ. ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

- Advertisement -

Latest Posts

Don't Miss