Wednesday, October 29, 2025

Latest Posts

ಇನ್ಮುಂದೆ ಕಾರು ಓಡಿಸೋಕೆ ಡ್ರೈವರ್ ಗಳೇ ಬೇಕಿಲ್ಲಾ, ಡ್ರೈವರ್ ಇಲ್ಲದೆ ಕಾರ್ ನಲ್ಲಿ ಓಡಾಡಿ!

- Advertisement -

ಇನ್ಮುಂದೆ ನೀವು ಕಾರನ್ನ ಚಾಲನೆ ಮಾಡೋ ಅವಶ್ಯಕತೆ ಇಲ್ಲಾ. ಯಾಕಂದ್ರೆ ಡ್ರೈವರ್ಲೆಸ್ ಕಾರ್ ಬಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ವಿಪ್ರೋ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಸ್ವಯಂಚಾಲಿತ ಕಾರಿನ ಪ್ರೋಟೋಟೈಪ್ ಇದೀಗ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಈ ಕಾರು RV ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರಯೋಗಾತ್ಮಕವಾಗಿ ಓಡಿಸಲಾಯಿತು.

ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಈ ಪ್ರೋಟೋಟೈಪ್ ಕಾರಿನಲ್ಲಿ ಪ್ರಯಾಣಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆರು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ ಈ ಪ್ರೋಟೋಟೈಪ್ ಕಾರು ರೂಪುಗೊಂಡಿದೆ. ವಿಪ್ರೋ, IISc ಹಾಗೂ ಆರ್‌ವಿ ಎಂಜಿನಿಯರಿಂಗ್ ಕಾಲೇಜುಗಳ ಸಹಯೋಗದಲ್ಲಿ ಪ್ರಾಜೆಕ್ಟ್ ಕೈಗೊಳ್ಳಲಾಗಿದೆ.

ಕಾರು ಪ್ರಾಯೋಗಿಕ ಹಂತದಲ್ಲಿದ್ದು, ಇನ್ನೂ ಸಾರ್ವಜನಿಕ ರಸ್ತೆಗಳ ಮೇಲೆ ಪರೀಕ್ಷೆ ನಡೆಸಲಾಗಿಲ್ಲ. ಈ ಕುರಿತಂತೆ ವಿಪ್ರೋ ಅಥವಾ ಐಐಎಸ್‌ಸಿಯಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ. ವಿಪ್ರೋ ಸಂಸ್ಥೆಯು 2019ರಲ್ಲೇ ಐಐಎಸ್‌ಸಿಯೊಂದಿಗೆ ಕೈಜೋಡಿ ಆಟೋನೋಮಸ್ ಸಿಸ್ಟಮ್ಸ್, ರೋಬೋಟಿಕ್ಸ್ ಮತ್ತು 5G ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಮುಂದಾಗಿತ್ತು.

ಇದರ ಭಾಗವಾಗಿ WIRIN (Wipro IISc Research and Innovation Network) ಸ್ಥಾಪಿಸಲಾಯಿತು. ಈ ಯೋಜನೆಯಲ್ಲಿ ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ವಿಷುವಲ್ ಕಂಪ್ಯೂಟಿಂಗ್, ಹ್ಯೂಮನ್-ಕಂಪ್ಯೂಟರ್ ಇಂಟರ್ಯಾಕ್ಷನ್ ಹಾಗೂ ವಾಹನ–ಟು–ಎವ್ರಿಥಿಂಗ್ ಕಮ್ಯೂನಿಕೇಶನ್ ತಂತ್ರಜ್ಞಾನಗಳ ಅಭಿವೃದ್ಧಿ ಮೇಲೆ ಕೆಲಸ ನಡೆಯುತ್ತಿದೆ.

ವಿಪ್ರೋ– IISc–RV ಕಾಲೇಜುಗಳ ಸಹಯೋಗದ ಈ ಡ್ರೈವರ್ಲೆಸ್ ಕಾರ್ ಪ್ರಾಜೆಕ್ಟ್ ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದ ಹೊಸ ಯುಗಕ್ಕೆ ನಾಂದಿ ಹಾಡುವಂತಾಗಿದೆ. ಭಾರತೀಯ ರಸ್ತೆ ಪರಿಸ್ಥಿತಿಗೆ ತಕ್ಕ ಸ್ವಯಂಚಾಲಿತ ವಾಹನ ನಿರ್ಮಾಣದಲ್ಲಿ ಇದು ಪ್ರಮುಖ ಮೈಲುಗಲ್ಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss